ಮಡಿಕೇರಿ, ಅ. ೧೯: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೇಟಿ ಬಚಾವೋ-ಬೇಟಿ ಪಡಾವೊ ಕಾರ್ಯಕ್ರಮದಡಿಯಲ್ಲಿ ಅಂರ‍್ರಾಷ್ಟಿçÃಯ ಸಾಕ್ಷರತಾ ದಿನಾಚರಣೆಯು ಸೋಮವಾರಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಸೋಮವಾರಪೇಟೆ ತಾಲೂಕಿನ ಸ್ತಿçà ಶಕ್ತಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಕುರಿತು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಮಾತನಾಡಿ, ಮೊದಲಿಗೆ ನಾವು ತಳಮಟ್ಟದಿಂದ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿದ್ದು, ಕೇಂದ್ರ ಸರ್ಕಾರದ ಪೋಷಣಾ ಅಭಿಯಾನ ಯೋಜನೆಯ ಸುಪೋಷಿತ ಕಿಶೋರಿ ಸಶಕ್ತ ನಾರಿ ಘೋಷವಾಕ್ಯದಂತೆ ಹೆಣ್ಣು ಮಗು ಜನಿಸಿ ಮನೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ತೆರಳಿ ಒಂದು ಗುಲಾಬಿ ಹೂ ನೀಡುವುದರ ಮುಖಾಂತರ ಆ ಮಗುವನ್ನು ಸ್ವಾಗತಿಸುವುದರೊಂದಿಗೆ ಕುಟುಂಬದವರಿಗೆ ಹೆಣ್ಣು ಮಗುವಿನ ಮಹತ್ವವನ್ನು ತಿಳಿ ಹೇಳಿದಾಗ ಮುಂದಿನ ದಿನಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಡರ್ ಸ್ಪೆಷಲಿಸ್ಟ್ ಎಸ್.ಆರ್. ಕೇಶಿನಿ ಮಾತನಾಡಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಬೇಟಿ ಬಚಾವೋ- ಬೇಟಿ ಪಡಾವೊ ಕಾರ್ಯಕ್ರಮದಡಿಯಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಶಿಕ್ಷಣವಂತಾರಾಗಬೇಕು. ಓದುವ ಹಾಗೂ ಬರೆಯುವ ಸಾಮರ್ಥ್ಯವನ್ನು ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತೃವಂದಾನಾ ಯೋಜನೆಯ ಜಿಲ್ಲಾ ಸಂಯೋಜಕಿ ನವ್ಯ, ಪೋಷಣಾ ಅಭಿಯಾನ ಯೋಜನೆ ತಾಲೂಕು ಸಂಯೋಜಕಿ ರಂಜಿತಾ ಹಾಗೂ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ, ಶನಿವಾರಸಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.