ಸಿದ್ದಾಪುರ, ಅ. ೧೯: ನಾಲ್ವರು ವ್ಯಕ್ತಿಗಳ ಗುಂಪೊAದು ವಿದೇಶಿ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬಡ ಯುವಕರಿಂದ ಬರೋಬ್ಬರಿ ರೂ. ೫.೧೦ ಲಕ್ಷ ಹಣ ಪಡೆದು ವಂಚಿಸಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ.

ಸಮಾರಂಭವೊAದರಲ್ಲಿ ನೆಲ್ಲಿಹುದಿಕೇರಿ ಎಂ.ಜಿ. ಕಾಲೋನಿ ನಿವಾಸಿ ಶೈಜನ್ ಎಂಬ ಯುವಕನನ್ನು ಶಫೀಕ್ ಎಂಬಾತ ಪರಿಚಯ ಮಾಡಿಕೊಂಡಿದ್ದನು. ಪರಿಚಯದ ವೇಳೆ ತಾನು ಹೊರದೇಶ ಖತಾರ್‌ನಲ್ಲಿ ಸ್ವಂತ ಕಂಪೆನಿಯನ್ನು ಹೊಂದಿದ್ದು, ಕೆಲಸಕ್ಕೆ ಯುವಕರು ಬೇಕಾಗಿದ್ದು ಯಾರಾದರು ಪರಿಚಯಸ್ಥರಿದ್ದರೆ ತಿಳಿಸುವಂತೆ ಹೇಳಿ ತನ್ನ ದೂರವಾಣಿ ಸಂಖ್ಯೆಯನ್ನು ಶೈಜನ್‌ಗೆ ನೀಡಿದ್ದನು. ಪದವಿ ವ್ಯಾಸಂಗ ಮುಗಿಸಿ ಕೆಲಸ ಹುಡುಕುತ್ತಿದ್ದ ಶಫೀಕ್‌ನ ಮಾತು ಕೇಳಿ ತಾನು ಕೆಲಸದ ಆಕಾಂಕ್ಷಿಯಾಗಿದ್ದೇನೆ ಹಾಗೂ ತನ್ನ ಸ್ನೇಹಿತರು ಕೆಲಸಕ್ಕೆ ಬರುತ್ತಾರೆ ಎಂದು ಹೇಳಿದ್ದನು. ನಂತರ ಶಫೀಕ್ ಶೈಜನ್ ಬಳಿ ಖತಾರ್‌ನಲ್ಲಿರುವ ತನ್ನ ಕಂಪೆನಿಯಲ್ಲಿ ಕೆಲಸ ಖಚಿತವಾಗಿದ್ದು, ರೂ. ೮೦ ಸಾವಿರ ವೇತನ ನೀಡುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೆ ಕೆಲವು ಯುವಕರು ಬೇಕಾಗಿದ್ದು ವ್ಯವಸ್ಥೆ ಮಾಡುವಂತೆ ಹೇಳಿದ ಹಿನ್ನೆಲೆಯಲ್ಲಿ ಶೈಜನ್ ತನ್ನ ಸ್ನೇಹಿತರನ್ನು ಶಫೀಕ್‌ಗೆ ಪರಿಚಯ ಮಾಡಿಕೊಡುತ್ತಾನೆ. ಎಲ್ಲರ ಮಾಹಿತಿ ಪಡೆದುಕೊಂಡ ಶಫೀಕ್ ವೀಸಾ ಸಿಗಬೇಕಾದರೆ ಇಂತಿಷ್ಟು ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದು ಈತನ ಮಾತನ್ನು ನಂಬಿದ ಏಳು ಯುವಕರು ಶಫೀಕ್ ನೀಡಿದ ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ಒಟ್ಟು ರೂ ೫.೧೦ ಲಕ್ಷ ಹಣವನ್ನು ಪಾವತಿಸಿದ್ದಾರೆ. ನಂತರ ಕೆಲದಿನ ಸಂಪರ್ಕದಲ್ಲಿದ್ದ ಶಫೀಕ್ ಬಳಿಕ ಸಂಪರ್ಕದಿAದ ದೂರವಾಗುತ್ತಾನೆ. ಅಲ್ಲದೆ ವೀಸಾ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಹೇಳುತ್ತಾ ಯುವಕರನ್ನು ಗದರಿಸಿದ್ದಾನೆ. ಜುಲೈ ತಿಂಗಳಲ್ಲಿ ಹಣ ಪಡೆದ ಈತ ಮೂರು ತಿಂಗಳು ಕಳೆದರೂ ಕೆಲಸ ನೀಡದ ಹಿನ್ನೆಲೆಯಲ್ಲಿ ಯುವಕರು ತಮ್ಮ ಹಣವನ್ನು ಹಿಂತಿರುಗಿಸುವAತೆ ಕೋರಿದ್ದಾರೆ. ಈ ಸಂದರ್ಭ ಯುವಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಕೊಲೆಬೆದರಿಕೆಯನ್ನು ಒಡ್ಡಿರುವುದಾಗಿ ಯುವಕರು ಕೇರಳ ಮೂಲದ ತ್ರಿಶೂರಿನ ಶಫೀಕ್ ಹಾಗೂ ಆತನ ಸಹಚರರಾದ ನಾಪೊಕ್ಲು ಗ್ರಾಮದ ಹೇಮಂತ್ ಬೋಪಣ್ಣ, ಗಿರೀಶ್ ಹಾಗೂ ರಮೇಶ್ ರಾಂ ಎಂಬವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.