ಮಡಿಕೇರಿ, ಅ. ೧೯: ಅಕ್ರಮವಾಗಿ ಗಾಂಜಾ ಬೆಳೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಎಮ್ಮೆಮಾಡು ಗ್ರಾಮದ ಮಾಂದಲ್ ಅಂಗನವಾಡಿ ಸಮೀಪದ ಮನೆಯ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಬಗ್ಗೆ ದೊರೆತ ಮಾಹಿತಿ ಅನ್ವಯ ದಾಳಿಮಾಡಿದ ಪೊಲೀಸರು ಆರೋಪಿ ಅದೇ ಗ್ರಾಮದ ಕನ್ನಡಿಯಂಡ ಎಂ. ಮಹಮ್ಮದ್ (೪೩) ಎಂಬಾತನನ್ನು ಬಂಧಿಸಿ, ೧೨ ಗಾಂಜಾ ಗಿಡಗಳು, ೧೩ ಕಾಂಡಗಳನ್ನೊಳಗೊAಡ ೩೫ ಕೆ.ಜಿ. ೬೭೫ ಗ್ರಾಂ ಹಸಿ ಗಾಂಜಾ ಹಾಗೂ ೨೭೫ ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ರವಿ ಹಾಗೂ ಸಿಬ್ಬಂದಿ, ಡಿಸಿಆರ್‌ಬಿ ನಿರೀಕ್ಷಕರಾದ ಐ.ಪಿ. ಮೇದಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.