ಚೆಟ್ಟಳ್ಳಿ, ಅ. ೧೯: ಕೃಷಿಕರು ಬೆಳೆದ ಬಗೆಬಗೆಯ ಹಣ್ಣಿನ ಪ್ರದರ್ಶನ ಹಾಗೂ ವೈವಿಧ್ಯತಾ ಮೇಳವು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋ ಗಿಕ ಕೇಂದ್ರದಲ್ಲಿ ಗಮನ ಸೆಳೆಯಿತು.

ರೈತರು ಬೆಳೆದ ಹಣ್ಣುಗಳಾದ ಕೊಡಗಿನ ಕಿತ್ತಳೆ, ರಸಬಾಳೆ, ಪಚ್ಚೆಬಾಳೆ, ಚಂದ್ರಬಾಳೆ, ಸಪೋಟ, ಹಲಸು, ಪ್ಯಾಶನ್‌ಫ್ರೂಟ್, ಅಂಬಟೆ, ಸೀಬೆಕಾಯಿ, ಬೆಣ್ಣೆಹಣ್ಣು, ನಿಂಬೆ, ಪಪ್ಪಾಯ, ಚಕೋತ, ಚೆರಿ, ಪಾಲೆಹಣ್ಣು, ನೆಲ್ಲಿಕಾಯಿ ಜೊತೆಗೆ ವಿದೇಶಿ ಹಣ್ಣುಗಳಾದ ರಾಂಬೂ ಟಾನ್, ಮ್ಯಾಂಗೊಸ್ಟೀನ್, ಫಿಂಗರ್ ಬನಾನ, ಮೆಕಡೋಮಿಯ, ಡ್ರಾö್ಯಗನ್ ಫ್ರೂಟ್, ಚೆರಿಗೋವಾ, ಬಂಚ್ ಗೋವಾ, ರೋಲಿನಿಯಾ, ಫಿಗ್, ಎಗ್‌ಫ್ರೂಟ್ ಹಣ್ಣುಗಳು ಪ್ರದರ್ಶನಗೊಂಡವು.

ಚೆಟ್ಟಳ್ಳಿಯ ಕೇಂದ್ರೀಯ ತೋಟ ಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿಧ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬೂಟಾನ್ ಹಣ್ಣಿನ ಕ್ಷೇತ್ರೋತ್ಸವ, ಅಧಿಕ ಮೌಲ್ಯದ ವಿದೇಶಿ ತೋಟ ಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಮೂಲಕ ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ ನಡೆದವು.

ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕು ಗಳ ಕಾಯ್ದೆಯ ಅಧ್ಯಕ್ಷ ಡಾ. ಟ್ರಿಲೋ ಚನ್ ಮೊಹಪತ್ರ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ಕೇಂದ್ರೀಯ ತೋಟಗಾರಿಕಾ ಕೇಂದ್ರವು ಕೃಷಿಯಲ್ಲಿ ವೈವಿಧ್ಯತೆಯನ್ನು ಕಂಡುಕೊಳ್ಳುತ್ತಿದೆ. ಇಂದು ಚೆಟ್ಟಳ್ಳಿಯ ಕೇಂದ್ರದಲ್ಲಿ ವಿವಿಧ ತಳಿಗಳ ಅಭಿವೃದ್ಧಿ ಕಾರ್ಯ ನಡೆಯು ತ್ತಿದೆ. ಕೃಷಿಗೆ ಸರಕಾರ ವಿವಿಧ ಯೋಜನೆ ಗಳನ್ನು ಜಾರಿಗೊಳಿಸುತ್ತಿದ್ದು, ರೈತರು ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿಯತ್ತ ಸಾಗಬೇಕು. ಭಾ.ಕೃ. ಅ.ಪ.-ಭಾ.ತೋ.ಸಂ.ಸ. ನಿರ್ದೇಶಕ ಪ್ರೊ. ಟಿ.ಕೆ. ಬೆಹೆರ ಮಾತನಾಡಿ, ಕೊಡಗಿನ ಕಿತ್ತಳೆಗೆ ಹೆಸರುವಾಸಿಯಾ ಗಿದ್ದು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮೂಲಕ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುವುದೆಂದರು.

ಕಾಫಿ ಮಂಡಳಿಯ ಮಾಜಿ ಉಪಾದ್ಯಕ್ಷ ಹಾಗೂ ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ, ಕೂರ್ಗ್ ಮ್ಯಾಂಡರಿನ್ ಅಭಿವೃದ್ಧಿಗೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರವು ಪ್ರಾರಂಭಗೊAಡಿದೆಯಾ ದರೂ ಇತರೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವಂತಾಗಿದೆ ಎಂದರು. ಕೇಂದ್ರದಲ್ಲಿ ವಿಜ್ಞಾನಿಗಳ ಹಾಗೂ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.

ಕೃಷಿಕರು ಸಂಶೋದಿತ ಅರಿಗೋಲ್ಡ್ ಹಾಗೂ ತಿರುಮಲಾ ಎಂಬ ಹಲಸು ತಳಿ ಹಾಗೂ ಲಕ್ಷ್ಮಣಾ ಎಂಬ ಹುಣಸೆ ತಳಿಗಳನ್ನು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಕಾನೂನಾತ್ಮಕ ವಾಗಿ ಪಡೆಯುವ ಮೂಲಕ ಕೃಷಿಕರಿಗೆ ಚೆಕ್ ನೀಡಲಾಯಿತು.

ಕೊಡಗಿನ ಪ್ರಗತಿಪರ ರೈತರಾದ ನಾಪಂಡ ಎನ್. ಪೂಣಚ್ಚ, ಸುಧೀರ್ ಕುಮಾರ್ ಮಕ್ಕಿಮನೆ, ತಾಪಂಡ ವಾಸು ಕಾರ್ಯಪ್ಪ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಟ್ರಿಲೋಚನ್ ಮೊಹಪತ್ರರ ಇವರು ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಐಐಎಚ್‌ಆರ್ ಪ್ರಾರ್ಥನೆ ಗೀತೆ ಯೊಂದಿಗೆ ಪ್ರಾರಂಭಗೊAಡ ಕಾರ್ಯ ಕ್ರಮದಲ್ಲಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಶಂಕರನ್ ಎಂ. ಸ್ವಾಗತಿಸಿ, ಕೇಂದ್ರದ ವಿಜ್ಞಾನಿ ಮುರುಳೀಧರ್ ಬಿ.ಎಂ. ವಂದಿಸಿದರು. ಕೇಂದ್ರದ ವಿಜ್ಞಾನಿ ಡಾ. ರಾಣಿ ಎ.ಟಿ. ನಿರೂಪಿ ಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವಿಚಾರ ಮಂಡನೆ

ಅಧಿಕ ಮೌಲ್ಯದ ವಿದೇಶಿ ತೋಟ ಗಾರಿಕಾ ಬೆಳೆಗಳ ಅಭಿವೃದ್ಧಿ ಸಂಘದ ಮೂಲಕ ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮದ ಬಗ್ಗೆ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಬೆಂಗಳೂರಿನ ಪ್ರಧಾನ ವಿಜ್ಞಾನಿಗಳಾದ ಡಾ. ವಾಸುಗಿ ಸಿ ಹಾಗೂ ರಾಂಬೂಟಾನ್ ಹಾಗೂ ಮ್ಯಾಂಗೋ ಸ್ಟೀನ್ ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಹಣ್ಣು ವಿಜ್ಞಾನಿ ಡಾ. ಮುರಳೀಧರ ಬಿ.ಎಂ. ವಿಷಯ ಮಂಡನೆ ಮಾಡಿದರು.

ಬಹುಮಾನ: ಉತ್ತಮ ಕೃಷಿ ಹಣ್ಣಿನ ಮಾದರಿ ಪ್ರದರ್ಶನಕ್ಕೆ ಬಹುಮಾನ ನೀಡಲಾಯಿತು. ರವಿಶಂಕರ್ ಹಾಗು ಸುಧೀರ್ ಕುಮಾರ್ ಮಕ್ಕಿಮನೆ ಪ್ರಥಮ ಬಹುಮಾನ ರೂ.೫ ಸಾವಿರ,

ನಿರ್ಮಲಾ ಜಯಪ್ರಕಾಶ್ ಹಾಗೂ ಎಂ.ಎA.ಸೋಮಯ್ಯ ದ್ವಿತೀಯ ಬಹುಮಾನ ರೂ. ೩ ಸಾವಿರ, ಪುತ್ತರಿರ ಕರುಣ್ ಕಾಳಯ್ಯ ಹಾಗೂ ಮಂದಪ್ಪ ಪಿ.ಆರ್ ತೃತೀಯ ಬಹುಮಾನ ರೂ. ೨ ಸಾವಿರಗಳನ್ನು ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ತಮಿಳುನಾಡು, ಕೇರಳ, ಆಂದ್ರಪ್ರದೇಶ ಸೇರಿದಂತೆ ಕರ್ನಾಟಕದ ವಿವಿ ಧೆಡೆಗಳಿಂದ ಸುಮಾರು ೨೫೦ಕ್ಕೂ ಅಧಿಕ ಕೃಷಿಕರು ಭಾಗವಹಿಸಿದ್ದರು.

- ಪುತ್ತರಿರ ಕರುಣ್ ಕಾಳಯ್ಯ