ಮಡಿಕೇರಿ, ಅ. ೨೦: ಬೆಂಗಳೂರು ಹಾಕಿ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಕೊಡಗಿನವರಾದ ಮಾಜಿ ಅಂತರರಾಷ್ಟಿçÃಯ ಹಾಕಿ ತೀರ್ಪುಗಾರರಾದ ಅಚ್ಚಕಾಳೆರ ಪಳಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ನಿನ್ನೆ ಚುನಾವಣೆ ನಿಗದಿಯಾಗಿದ್ದು, ಪಳಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯಲ್ಲಿ ಇವರೊಂದಿಗೆ ಕೊಡಗಿನವರಾದ ಇನ್ನು ನಾಲ್ವರು ಸೇರ್ಪಡೆಗೊಂಡಿದ್ದಾರೆ. ಮೂವರು ಉಪಾಧ್ಯಕ್ಷರ ಪೈಕಿ ಒಬ್ಬರಾಗಿ ಜಿಲ್ಲೆಯವರಾದ ಲೋಕೇಶ್, ಜಂಟಿ ಕಾರ್ಯದರ್ಶಿಯಾಗಿ ಗುಮ್ಮಟ್ಟಿರ ವಿವೇಕ್ ಹಾಗೂ ಖಜಾಂಚಿಯಾಗಿ ವಿನೋಬ ಅವರುಗಳು ಆಯ್ಕೆಯಾಗಿದ್ದಾರೆ.