ಮಡಿಕೇರಿ, ಅ. ೨೦: ಕೊಡವ ಜನಾಂಗದವರು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲೇ ನೆಲೆಕಂಡಿದ್ದಾರೆ. ಆದರೆ, ವಿವಿಧ ಕಾರಣಗಳಿಂದ ನಗರ- ಪಟ್ಟಣ ಪ್ರದೇಶಗಳಲ್ಲಿಯೂ ಉದ್ಯೋಗ- ವ್ಯಾಪಾರ- ಶಿಕ್ಷಣದಂತಹ ವಿಚಾರದಿಂದಾಗಿ ಅವಲಂಬಿತರಾಗಬೇಕಾಗಿದ್ದು, ಇಂತಹ ಪ್ರದೇಶಗಳಲ್ಲಿ ವಿವಿಧ ಕುಟುಂಬದವರು ತಮ್ಮ ತಮ್ಮ ಊರು- ನಾಡುಗಳಿಂದ ದೂರವಾಗಿ ಬದುಕು ಸಾಗಿಸುತ್ತಿದ್ದಾರೆ. ಇವರೆಲ್ಲರ ಕಷ್ಟ- ಸುಖಗಳಿಗೆ ಪರಸ್ಪರ ಸಹಕರಿಸಲು, ಕೊಡವ ಪದ್ಧತಿ ಪರಂಪರೆ- ಸಂಸ್ಕೃತಿ, ಹಬ್ಬ-ಹರಿದಿನಗಳ ಪರಂಪರೆಯನ್ನು ಪಾಲಿಸುವ ಧ್ಯೇಯೋದ್ದೇಶದೊಂದಿಗೆ ನಗರ - ಪಟ್ಟಣಗಳಲ್ಲಿ ಕೊಡವಕೇರಿಗಳನ್ನು ಪ್ರಾರಂಭಿಸಲಾಗಿದೆ. ಇದರಂತೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ೧೨ ಕೊಡವ ಕೇರಿಗಳು, ವಿವಿಧ ವಿಭಾಗಗಳನ್ನು ಒಳಗೊಂಡAತೆ ಅಸ್ತಿತ್ವಕ್ಕೆ ಬಂದಿದೆ. ಇವರೆಲ್ಲರನ್ನೂ ಪರಸ್ಪರ ಒಂದಾಗಿ ಬೆಸೆಯುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳ ಹಿಂದಿನಿAದ ಕೊಡವ ಅಂತರಕೇರಿ ಜನಪದ ಸಾಂಸ್ಕೃತಿಕ ಮೇಳ ಎಂಬ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಆತಿಥ್ಯ ವಹಿಸುವ ಯಾವುದಾದರೊಂದು ಕೇರಿಯ ಮುಂದಾಳ ತ್ವದಲ್ಲಿ ಈ ಸಾಂಸ್ಕೃತಿಕ ಮೇಳ ನಡೆಯುತ್ತಿದ್ದು,

(ಮೊದಲ ಪುಟದಿಂದ) ಈತನಕ ೬ ಅಂತರಕೊಡವಕೇರಿ ಮೇಳ ನಡೆದಿದೆ. ೬ನೇ ಮೇಳ ೨೦೧೮ರಲ್ಲಿ ಮುತ್ತಪ್ಪಕೇರಿಯ ಮುಂದಾಳತ್ವದಲ್ಲಿ ಸಂಭ್ರಮದಿAದ ನಡೆದಿತ್ತು. ಆದರೆ, ನಂತರದಲ್ಲಿ ಕೊರೊನಾ ಮತ್ತಿತರ ಕಾರಣದಿಂದಾಗಿ ಐದು ವರ್ಷ ವಿಳಂಬವಾಗಿದ್ದು, ಇದೀಗ ೭ನೇ ಅಂತರಕೊಡವಕೇರಿ ಮೇಳ ನಿಗದಿಯಾಗಿದೆ.

ಈ ಬಾರಿ ಸುಬ್ರಹ್ಮಣ್ಯ ಕೊಡವಕೇರಿಯ ಮುಂದಾಳತ್ವದಲ್ಲಿ ನವೆಂಬರ್ ೯ರ ಶನಿವಾರದಂದು ಈ ಕಾರ್ಯಕ್ರಮ ಆಯೋಜಿತವಾಗಿದೆ. ನ.೯ರಂದು ಮಡಿಕೇರಿ ಕೊಡವ ಸಮಾಜದ ಆವರಣದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಅಂದು ಬೆಳಿಗ್ಗೆ ೮.೪೫ಕ್ಕೆ ಮೇಳದ ಉದ್ಘಾಟನೆ ನಡೆಯಲಿದೆ. ಸುಬ್ರಹ್ಮಣ್ಯ ಕೊಡವಕೇರಿಯ ಹಿರಿಯ ಸದಸ್ಯ ಕಾಳಿಮಾಡ ನಾಚಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಬೊಳಕಾಟ್, ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ಬಾಳೋಪಾಟ್, ಉಮ್ಮತ್ತಾಟ್ ಮತ್ತಿತರ ಕೊಡವ ಜಾನಪದ ಕಲೆಗಳ ಪೈಪೋಟಿ ವಿವಿಧ ಕೇರಿಗಳ ನಡುವೆ ಅಂತರಕೇರಿ ಸ್ಪರ್ಧೆಯಾಗಿ ನಡೆಯಲಿದೆ. ವಿವಿಧ ಸ್ಪರ್ಧೆಗಳೊಂದಿಗೆ ವಿವಿಧ ವಿಭಾಗಗಳನ್ನು ಒಳಗೊಂಡAತೆ ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನ ನಡೆಯಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಮಡಿಕೇರಿ ಕೊಡವ ಸಮಾಜದ ನೇತೃತ್ವದಲ್ಲಿ ಹಲವು ಸಭೆ ನಡೆದಿವೆ. ಅಪರಾಹ್ನ ೩.೩೦ರ ಬಳಿಕ ಸಭಾ ಕಾರ್ಯಕ್ರಮ ಜರುಗಲಿದ್ದು, ಅಂತರಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ. ನಾಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅಧ್ಯಕ್ಷರಾಗಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ, ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್‌ಗೌಡ, ಕೊಡವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ, ಮಾಜಿ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮಡಿಕೇರಿ ಕೊಡವ ಸಮಾಜವೂ ಸಹಕಾರ ನೀಡುತ್ತಿದೆ. ನಗರ ವ್ಯಾಪ್ತಿಯ ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘ, ದೇಚೂರು ಕೊಡವಕೇರಿ, ಸುದರ್ಶನಕೇರಿ, ಕಾವೇರಿಕೇರಿ, ರಾಣಿಪೇಟೆ ಕೊಡವ ಕೂಟ, ವಿನಾಯಕಕೇರಿ, ಮುತ್ತಪ್ಪಕೇರಿ, ಗಣಪತಿಕೇರಿ, ಇಗ್ಗುತ್ತಪ್ಪಕೇರಿ, ಎಫ್.ಎಂ.ಸಿ.ಕೇರಿ ಹಾಗೂ ಭಗವತಿ ಕೊಡವಕೇರಿಗಳು ಪಾಲ್ಗೊಳ್ಳಲಿವೆ. ಒಟ್ಟಾರೆ ಕಾರ್ಯಕ್ರಮದ ಮುಂದಾಳತ್ವ ಸುಬ್ರಹ್ಮಣ್ಯ ಕೊಡವಕೇರಿಯದ್ದಾಗಿದೆ.