ಮಡಿಕೇರಿ, ಅ. ೨೦: ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳು ನಡೆಯಲಿವೆ.

ತಾ. ೨೨ರಂದು ಮುತ್ತಾರುಮುಡಿ ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸದಸ್ಯ ಬಿ.ಎಸ್. ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ, ಅಪರಾಹ್ನ ೨ ಗಂಟೆಗೆ ವೆಂಕಟೇಶ್ವರ ಕಾಲೋನಿ ಅಂಗನವಾಡಿ ಕಟ್ಟಡದಲ್ಲಿ ಸದಸ್ಯೆ ಸುಜಾತ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ತಾ.೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಐಕೊಳ ಗ್ರಾಮದ ಸಮುದಾಯ ಭವನದಲ್ಲಿ ದಿವ್ಯ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೨ ಗಂಟೆಗೆ ಕಾಂತೂರು ಗ್ರಾಮದ ಧವಸ ಭಂಡಾರದಲ್ಲಿ ಸುಂದರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ತಾ.೨೪ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸದಸ್ಯೆ ಮೀನಾಕ್ಷಿ ದೇವಯ್ಯ ಅಧ್ಯಕ್ಷತೆಯಲ್ಲಿ ಎಂ.ಬಾಡಗ ಧವಸ ಭಂಡಾರದಲ್ಲಿ, ಮಧ್ಯಾಹ್ನ ೨ಕ್ಕೆ ಕೃತಿ ಅಧ್ಯಕ್ಷತೆಯಲ್ಲಿ ಕಿಗ್ಗಾಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ನಡೆಯಲಿದೆ.

ತಾ.೨೫ರಂದು ಬೆಳಿಗ್ಗೆ ೧೦.೩೦ಕ್ಕೆ ಸದಸ್ಯೆ ವಿಜಯಲಕ್ಷಿö್ಮ ಅಧ್ಯಕ್ಷತೆಯಲ್ಲಿ ಮೂರ್ನಾಡು ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ, ೨ ಗಂಟೆಗೆ ಪುಷ್ಪಲತಾ ಅಧ್ಯಕ್ಷತೆಯಲ್ಲಿ ಕೋಡಂಬೂರು ಅಂಗನವಾಡಿ ಕಟ್ಟಡದಲ್ಲಿ ಸಭೆ ನಡೆಯಲಿದೆ.

ನವೆಂಬರ್ ೭ರಂದು ಮೂರ್ನಾಡು ಸಮುದಾಯ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಅಧ್ಯಕ್ಷ ಬಿ.ಎಸ್. ಕಿಶನ್ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಲಿದೆ ಎಂದು ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.