ಶನಿವಾರಸಂತೆ, ಅ. ೨೦: ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಹಾಗೂ ಭಾರತಿ ವಿದ್ಯಾಸಂಸ್ಥೆ ಯಲ್ಲಿ ಕಲಿತ ೧೯೮೩ ರಿಂದ ೧೯೯೫ ರ ಸಾಲಿನ ವಿದ್ಯಾರ್ಥಿಗಳ ಸ್ನೇಹಿತರ ಬಳಗ ದಿಂದ ಗುರುವಂದನಾ ಕಾರ್ಯಕ್ರಮ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚರಣ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್ ಪಾಲ್ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಗುರು ವೃಂದದವರಾದ ಸಿ.ಎಲ್. ಸುಬ್ಬಯ್ಯ, ಡಿ.ಎಸ್. ರುಕ್ಮಿಣಿ, ದೊಡ್ಡಯ್ಯ, ಶಕುಂತಲಾ, ಹೇಮಾವತಿ, ವಿ.ಕೆ. ರತಿ, ಉತ್ತಪ್ಪ, ಭಾರತಿ ವಿದ್ಯಾಸಂಸ್ಥೆಯ ಜಿ.ಕೆ. ಲಕ್ಷಿö್ಮನರಸಿಂಹಯ್ಯ, ಎಸ್.ಪಿ. ರಾಜು, ಜಿ.ಬಿ. ನಾಗಪ್ಪ, ಎಂ.ಜಿ. ದೇವಯ್ಯ, ಎಂ.ಎನ್. ಮಲ್ಲಿಕಾರ್ಜುನ್, ವೇಣುಗೋಪಾಲ್, ನಯನತಾರಾ ಹೆಚ್.ಎ. ದೇವರಾಜ್, ಹೆಚ್.ಕೆ. ರಾಮನಂಜಯ್ಯ, ಎಂ.ಆರ್. ನಿರಂಜನ್, ಹೆಚ್.ಸಿ. ಮಲ್ಲೇಶ್, ಡಿ. ರವಿಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.

ಸಾಧಕರಾದ ಡಾ. ಪುಟ್ಟರಾಜ್, ನಿವೃತ್ತ ಸೈನಿಕ ನಾಗಣ್ಣ ಹಾಗೂ ಚೆಸ್ಕಾಂನ ಗಿರೀಶ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ವಿನೋದ್‌ಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಎಸ್. ಪ್ರದೀಪ್ ಸ್ವಾಗತಿಸಿ, ರಾಣಿ ರವೀಂದ್ರ ನಿರೂಪಿಸಿ, ರಜಿಯಾ ವಂದಿಸಿದರು.