ಸೋಮವಾರಪೇಟೆ, ಅ. ೨೦: ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ. ಸಮೀಪದ ಹಾನಗಲ್ ಬಾಣೆಯ ನಿವಾಸಿ ಸಿ.ಆರ್. ವೀರೇಶ್ ಎಂಬವರು ತನ್ನ ಬೈಕ್‌ನಲ್ಲಿ ಪರವಾನಗಿ ಇಲ್ಲದೆ ೩೨ ಟೆಟ್ರಾ ಪ್ಯಾಕ್‌ಗಳು, ಒಂದು ಲೀಟರ್ ಬ್ರಾಂಡಿಯನ್ನು ಸಾಗಿಸುತ್ತಿದ್ದ ಸಂದರ್ಭ ವಶಕ್ಕೆ ಪಡೆದಿದ್ದು, ಆರೋಪಿಯ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.