ಶ್ರೀಮಂಗಲ, ಅ. ೨೦: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿಯಲ್ಲಿ ಎರಡನೆ ದಿನದ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದಲ್ಲಿ ಗೋಣಿಕೊಪ್ಪದ ಜನನಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ವತಿಯಿಂದ ಮಹಿಳೆಯರಿಗೆ ರವೆ ಉಂಡೆ ಹಾಗೂ ಕೋಡುಬಳೆ ಮಾಡುವ ಅಡುಗೆ ಸ್ಪರ್ಧೆ ನಡೆಯಿತು. ೨೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ರವೆ ಉಂಡೆ ಮಾಡುವ ಸ್ಪರ್ಧೆಯಲ್ಲಿ ಮಾಯಣಮಾಡ ಭಾಗ್ಯ ಪ್ರಥಮ, ಕಟ್ಟೆರ ಸುನಿತ ದ್ವಿತೀಯ, ಕೋಟ್ರಮಡ ರೇಷ್ಮ ತೃತೀಯ, ಕೋಡುಬಳೆ ಮಾಡುವ ಸ್ಪರ್ಧೆಯಲ್ಲಿ ಮುಕ್ಕಾಟಿರ ಉಷ ಪ್ರಥಮ, ಮಲ್ಲಮಡ ಶ್ಯಾಮಲ ದ್ವಿತೀಯ, ಕೊಣಿಯಂಡ ಆಶ ತೃತೀಯ ಬಹುಮಾನ ಪಡೆದುಕೊಂಡರು. ಇವರಿಗೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಬಹುಮಾನ ನೀಡಿದರು. ಸಂಜೆ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟ ಸದಸ್ಯರ ಸಾಂಸ್ಕೃತಿಕ ಪ್ರದರ್ಶನ ಜನೋತ್ಸವಕ್ಕೆ ಮೆರುಗು ನೀಡಿತು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ಕೊಡವ ಯುವ ಜನಾಂಗವು ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅತೀವ ಅಭಿಮಾನವಿರಿಸಿಕೊಂಡಿದ್ದು, ಅವರಿಗೆ ಪೋಷಕರಿಂದ ಸಿಗದ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಎಂಟು ವರ್ಷಗಳಿಂದ ಜನೋತ್ಸವದ ರೀತಿಯಲ್ಲಿ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಪ್ರಯತ್ನ ಶ್ಲಾಘನೀಯ ಎಂದರು.

ಮತ್ತೋರ್ವ ಮುಖ್ಯ ಅತಿಥಿ ನಿವೃತ್ತ ಮುಖ್ಯೋಪಾಧ್ಯಾಯ ಮುಕ್ಕಾಟಿರ ವೇಣು ಮಾತನಾಡಿ ಎಲೆಮರೆಯ ಕಾಯಿಯಂತಿದ್ದ ಹಲವರ ಪ್ರತಿಭೆ ಅನಾವರಣಕ್ಕೆ ಈ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್ ಮಾತನಾಡಿ ಹತ್ತು ದಿನಗಳ ನಮ್ಮ ಈ ಕಾರ್ಯಕ್ರಮಕ್ಕೆ ಹಲವರು ವಿವಿಧ ರೀತಿಯ ಬೆಂಬಲ ನೀಡುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಕೋಟ್ರಮಡ ರಾಜ ದೇವಯ್ಯ, ಶಾಂತೆಯAಡ ಟೀನ ಮಧು ಹಾಗೂ ಚೊಟ್ಟೆಯಂಡಮಾಡ ಜಯಶ್ರಿ ಅಪ್ಪಣ್ಣ ಉಪಸ್ಥಿತರಿದ್ದರು.

ಕೊಡವ ಸಮಾಜದ ಸದಸ್ಯೆ ಮುಕ್ಕಾಟಿರ ಉಷ ಪ್ರಾರ್ಥಿಸಿ, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಸ್ವಾಗತಿಸಿ, ನಿರ್ದೇಶಕರಾದ ಚಂಗುಲAಡ ಅಶ್ವಿನಿ ಸತೀಶ್ ನಿರೂಪಿಸಿ, ಬಾದುಮಂಡ ವಿಷ್ಣು ವಂದಿಸಿದರು. ಕೊಡವ ಸಮಾಜದ ಖಜಾಂಚಿ ಚಂಗುಲAಡ ಸತೀಶ್ ಹಾಗೂ ನಿರ್ದೇಶಕಿ ತೀತಿರ ಅನಿತ ಸುಬ್ಬಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.