ಮಡಿಕೇರಿ, ಅ. ೨೦: ರೋಟರಿ ಮಡಿಕೇರಿ ವುಡ್ಸ್, ವಾಣಿಜ್ಯ, ಅರ್ಥಶಾಸ್ತç ಮತ್ತು ಕೌಶಲ್ಯ ಮತ್ತು ಉದ್ಯೋಗ ಘಟಕ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಹಯೋಗದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಬ್ಯಾಂಕಿAಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ಬ್ಯಾಂಕಿAಗ್ ಪರೀಕ್ಷಾ ಸಿದ್ಧತೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬ್ಯಾಂಕಿAಗ್ ತರಬೇತುದಾರರು ಹಾಗೂ ಅಂಕಣಕಾರರಾದ ಆರ್.ಕೆ ಬಾಲಚಂದ್ರ ಭಾಗವಹಿಸಿ, ಬ್ಯಾಂಕಿAಗ್ ಕ್ಷೇತ್ರದಲ್ಲಿ ಯುವಜನತೆಗೆ ಇರುವ ಅವಕಾಶ ಯುವಜನತೆ ಹೇಗೆ ಪರೀಕ್ಷೆಗೆ ಸಿದ್ಧರಾಗಬೇಕು? ಪರೀಕ್ಷೆಯ ಸ್ವರೂಪ ಏನು ಎಂಬ ಬಗ್ಗೆ ವಿವರಿಸುವ ಜೊತೆಗೆ, ಸ್ವತಃ ವಿದ್ಯಾರ್ಥಿಗಳಿಂದಲೇ ಸಮಸ್ಯೆಗಳನ್ನು ಪರಿಹಾರ ಮಾಡಿಸಿ, ತರಬೇತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಘವ ಬಿ, ಪದವಿ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳಿಗೆ ಕೌಶಲ್ಯ ಬಹಳ ಮುಖ್ಯ. ಈ ರೀತಿ ಕಾರ್ಯಕ್ರಮಗಳನ್ನು ಮಾಡುವುದು ಶಾಶ್ವತವಾಗಿ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್ ಮಾತನಾಡಿ, ಯುವಕರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ವೃದ್ಧಿಸಿಕೊಳ್ಳದ ಹೊರತಾಗಿ ಉದ್ಯೋಗ ಪಡೆದುಕೊಳ್ಳುವುದು ಅಸಾಧ್ಯ. ರೋಟರಿಯ ಜಿಲ್ಲಾ ಯೋಜನೆಯಾದ ಕೌಶಲ್ಯಾಭಿವೃದ್ಧಿ ಯೋಜನೆಯ ಅನ್ವಯ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಮುಂದೆಯೂ ಈ ರೀತಿ ತರಬೇತಿ ಹಮ್ಮಿಕೊಳ್ಳಲು ಸಿದ್ಧ. ರೋಟರಿ ಯಾವತ್ತೂ ಈ ರೀತಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಪ್ರೊ ತಿಪ್ಪೆಸ್ವಾಮಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಶೈಲಶ್ರೀ ಕೆ, ಡಾ.ಗಾಯತ್ರಿ ದೇವಿ ಎ., ಕೌಶಲ್ಯ ಮತ್ತು ಉದ್ಯೋಗ ಘಟಕದ ಮುಖ್ಯಸ್ಥ ಡಾ.ಪ್ರದೀಪ್ ಭಂಡಾರಿ ರೋಟರಿ ವುಡ್ಸ್ನ ವಸಂತ್ ಕುಮಾರ್, ರಾಜೇಶ್ ಚೌಧರಿ, ರವೀಂದ್ರ, ರವಿಕುಮಾರ್, ಜಹೀರ್ ಅಹ್ಮದ್, ರವಿ.ಪಿ, ಕಶ್ಯಪ್ ಮೊದಲಾದವರು ಹಾಜರಿದ್ದರು. ಡಾ.ಪ್ರದೀಪ್ ಭಂಡಾರಿ ಸ್ವಾಗತಿಸಿ, ವಂದಿಸಿದರು.