ಚೆಯ್ಯಂಡಾಣೆ: ಅಯ್ಯಂಗೇರಿಯ ಶಾಲೆ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ನಡೆಯಿತು. ವಿಶ್ವ ಕೈ ತೊಳೆಯುವ ದಿನದ ಹಾಗೂ ವಿಶ್ವ ಆಹಾರ ದಿನದ ಕುರಿತು ಬಾಲ ವಿಕಾಸ ಸಮಿತಿ, ಸ್ತಿçà ಶಕ್ತಿ ಸಂಘ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭ ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಶೀಲಾ ಆರೋಗ್ಯವೇ ಭಾಗ್ಯ ಎಂಬAತೆ ಕೈಯನ್ನು ತೊಳೆಯುವ ವಿಧಾನ ಕುರಿತು ಹಾಗೂ ವಿಶ್ವ ಆಹಾರ ದಿನದ ಬಗ್ಗೆ ಮಾಹಿತಿ ನೀಡಿ ಆಹಾರವನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಆದರೆ ಆಹಾರವನ್ನು ಬಿಸಾಡುವ ಹಕ್ಕು ನಮಗಿಲ್ಲ, ಎಲ್ಲರೂ ಪೌಷ್ಟಿಕ ಆಹಾರವನ್ನು ಉಪಯೋಗಿಸಿ ಅಪೌಷ್ಟಿಕತೆಯಿಂದ ವಿಮುಕ್ತರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭ ಅಯ್ಯಂಗೇರಿ ಶಾಲೆ ಅಂಗನವಾಡಿ ಕಾರ್ಯಕರ್ತೆ ಜಮೀಲ, ಸರೋಜ, ಸ್ವಪ್ನ, ಗೊಂಬೆ, ಸಣ್ಣಪುಲಿಕೋಟು ಅಂಗನವಾಡಿ ಕಾರ್ಯಕರ್ತೆ ರಮ್ಯಾ, ಸ್ತಿçÃಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತಿತರರು ಹಾಜರಿದ್ದರು.ಮೂರ್ನಾಡು: ಎಂ ಬಾಡಗ ೧ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೈಗಳ ಸ್ವಚ್ಛತೆ ಎಷ್ಟು ಮುಖ್ಯ ಮತ್ತು ಕೈ ತೊಳೆಯುವ ಆರು ವಿಧಾನಗಳನ್ನು ಅಳವಡಿಸಿಕೊಂಡು ಹೇಗೆ ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ.ಬಿ. ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ, ಎಂ ಬಾಡಗ ಅಂಗನವಾಡಿ ಕಾರ್ಯಕರ್ತೆ ಜಯಂತಿ ಮತ್ತು ಸಹಾಯಕಿ ಪ್ರೀತ ಹಾಜರಿದ್ದರು.ಕಡಗದಾಳು: ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಡಗದಾಳು ಸಿ.ಹೆಚ್.ಓ. ಕಲ್ಮೇಶ್ ಜೈನ್, ಪಿ.ಹೆಚ್.ಸಿ. ಕೀರ್ತನ, ಅಂಗನವಾಡಿ ಕಾರ್ಯಕರ್ತೆ ಕೆ.ಆರ್. ಅನಿಲ, ಸಹಾಯಕಿ ಹೇಮಲತಾ, ಅಂಗನವಾಡಿ ಕೇಂದ್ರದ ಮಕ್ಕಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.