ಕೂಡಿಗೆ, ಅ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಹಾರಂಗಿ ವೃಕ್ಷೆÆÃದ್ಯಾನ ಮತ್ತು ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಯಲ್ಲಿ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಸಾಕಾನೆ ಸಫಾರಿ ವ್ಯವಸ್ಥೆಯನ್ನು ಒದಗಿಸುವ ಚಿಂತನೆ ಮಾಡಲಾಗಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.

ಹಾರಂಗಿ ಸಾಕಾನೆ ಶಿಬಿರ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, ಹಾರಂಗಿ ಸಾಕಾನೆ ಶಿಬಿರದಲ್ಲಿ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಇದರ ಜೊತೆಯಲ್ಲಿ ವೃಕ್ಷೆÆÃದ್ಯಾನ ಕೇಂದ್ರದ ಮುಖ್ಯ ದ್ವಾರದಿಂದ ಸಾಕಾನೆ ಶಿಬಿರದವರೆಗೆ ನಡೆದುಕೊಂಡು ಬರಲು ಸಮಸ್ಯೆ ಆಗುತ್ತಿರುವ ಹಿನ್ನೆಲೆ ಈಗಾಗಲೇ ಇಲಾಖೆ ವತಿಯಿಂದ ಎರಡು ವಾಹನಗಳ ಖರೀದಿ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುಖ್ಯದ್ವಾರದಿಂದ ಶಿಬಿರದ ಕೇಂದ್ರದವರೆಗೆ ಸಮರ್ಪಕವಾದ ರಸ್ತೆಯ ವ್ಯವಸ್ಥೆಗೆ ಈಗಾಗಲೇ ರೂ. ೧೦ ಲಕ್ಷವನ್ನು ಬಳಕೆಮಾಡಿಕೊಂಡು ರಸ್ತೆಯ ಕಾಮಗಾರಿಯನ್ನು ಮಾಡಲಾಗುವುದು. ಅಲ್ಲದೆ ಸಾಕಾನೆ ಶಿಬಿರದ ಸಮೀಪದಲ್ಲಿ ಹಾರಂಗಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಯು ಆರಂಭಗೊAಡಿರುವ ಹಿನ್ನೆಲೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದಾಗಿ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಇಲಾಖೆಯ ವತಿಯಿಂದ ಒದಗಿಸುವ ಚಿಂತನೆ ಮಾಡಲಾಗುತ್ತಿದೆ ಎಂದು ಭಾಸ್ಕರ್ ತಿಳಿಸಿದರು.