ಮಡಿಕೇರಿ, ಅ. ೨೦: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾಜ ಬಾಂಧವರನ್ನು ಬೆಸೆಯುವ ಶಕ್ತಿಯಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಿಂದೂ ಮಲಯಾಳಿ ಸಂಘದ ವತಿಯಿಂದ ಓಣಾ ಘೋಷಂ ಮತ್ತು ಓಣಂ ಸಧ್ಯ ಅಂಗವಾಗಿ ನಡೆದ ಕ್ರೀಡಾಸ್ಪರ್ಧೆಗಳಲ್ಲಿ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ ಮಾತನಾ ಡಿದ ಅವರು, ಕೇರಳದ ಯುವಕ ನೋರ್ವ ಕುಶಾಲನಗರದಲ್ಲಿ ಮೃತಪಟ್ಟ ಸಂದರ್ಭ ಆತನ ತಾಯಿ ಕೇರಳದಲ್ಲಿ ಅಂತ್ಯಕ್ರಿಯೆ ಅಸಾಧ್ಯ ಎಂದು ತನ್ನ ದಯಾನೀಯತೆ ತೋಡಿಕೊಂಡಾಗ ಹಿಂದೂ ಮಲಯಾಳಿ ಸಂಘದವರೇ ಮನೆಯ ಸದಸ್ಯರಂತೆ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯ ತೆಯನ್ನು ಜೀವಂತವಾಗಿಸಿದ ಘಟನೆ ಎಲ್ಲಾ ಸಮಾಜದವರಿಗೂ ಮಾದರಿ ಎಂದು ಅನಿಲ್ ಹೇಳಿದರು.

ಶಕ್ತಿ ಪತ್ರಿಕೆಯ ಉಪಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ನಿದರ್ಶನದಂತೆ ಕೊಡಗಿನಲ್ಲಿ ಎಲ್ಲಾ ಸಮಾಜ ಬಾಂಧ ವರು ಒಗ್ಗಟ್ಟಿನಿಂದ ಜೀವಿಸುತ್ತಿದ್ದಾರೆ, ಹಿಂದೂ ಮಲಯಾಳಿ ಸಂಘದ ೧೧ ಶಾಖೆಗಳು ಕೊಡಗಿನಲ್ಲಿರುವುದು ಕೂಡ ಸಂಘದ ಬಲವರ್ಧನೆಗೆ ಕಾರಣ ವಾಗಿದೆ ಎಂದರು.

ಹಿAದೂ ಮಲಯಾಳಿ ಸಮಾ ಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಕ್ರೀಡಾಕೂಟಗಳ ಮೂಲಕ ಸಮಾಜಭಾಂದವರು ಒಟ್ಟಿಗೆ ಸೇರಲು ಸೂಕ್ತ ವೇದಿಕೆಯಾಗಿದೆ ಎಂದರಲ್ಲದೇ ವಯನಾಡಿನಲ್ಲಿ ಸಂಭವಿ ಸಿದ ಪ್ರಕೃತಿ ವಿಕೋಪದ ಹಿನ್ನಲೆ ಈ ಬಾರಿ ಜಿಲ್ಲೆಯ ಅನೇಕ ಕಡೆ ಓಣಂ ಸಂಭ್ರಮವನ್ನು ಪ್ರತೀ ವರ್ಷದಂತೆ ಮಾಡಲಾಗಿಲ್ಲ ಎಂದು ಹೇಳಿದರು.

ಓಣಂ ಆಚರಣಾ ಸಮಿತಿ ಅಧ್ಯಕ್ಷ ಟಿ.ಆರ್. ವಾಸುದೇವ್ ಮಾತನಾಡಿ,

(ಮೊದಲ ಪುಟದಿಂದ) ಓಣಾ ಘೋಷಂ, ಓಣಂ ಸಧ್ಯದ ಮೂಲಕ ಹಿಂದೂ ಮಲಯಾಳಿ ಸಮಾಜದವ ರನ್ನು ಒಗ್ಗೂಡಿಸುವ ಕಾರ್ಯ ಈ ವರ್ಷವೂ ಸದಸ್ಯರ ಸಹಕಾರ ದೊಂದಿಗೆ ಯಶಸ್ವಿಯಾಗಿದೆ ಎಂದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷ ಟಿ.ಕೆ ಸುಧೀರ್ ಮಾತನಾಡಿ, ಉದ್ದೇಶಿತ ಗುರಿಯತ್ತ ಛಲ ಮತ್ತು ಆಸಕ್ತಿಯನ್ನು ಪ್ರತಿಯೋರ್ವರೂ ರೂಢಿಸಿಕೊಂಡರೆ ಯಶಸ್ಸು ಸುಲಭಸಾಧ್ಯ ಎಂದರು.

ಹಿAದೂ ಮಲಯಾಳಿ ಸಂಘದ ಮಡಿಕೇರಿ ಅಧ್ಯಕ್ಷ ಕೆ.ವಿ. ಧರ್ಮೇಂದ್ರ, ನಿರ್ದೇಶಕ ವಿನೋದ್ ನಾಯರ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್. ರಮೇಶ್ ನಿರೂಪಿಸಿ, ಹಿಮಾನಿ ವಿಜಯಕುಮಾರ್ ಪ್ರಾರ್ಥಿಸಿ, ಅಂಜಲಿ ಅಶೋಕ್ ಸ್ವಾಗತಿಸಿ, ಹೆಚ್. ಪಿ. ಅಶೋಕ್ ವಂದಿಸಿದರು.

ಹಿAದೂ ಮಲಯಾಳಿ ಸಂಘದ ಸದಸ್ಯರು, ಕುಟುಂಬಸ್ಥರಿಗೆ ಹಗ್ಗಜಗ್ಗಾಟ, ಕ್ರಿಕೆಟ್, ಆಟೋಟಗಳು ಸೇರಿದಂತೆ ವೈವಿಧ್ಯಮಯ ಸ್ಪರ್ಧೆ ಆಯೋಜಿಸಲಾಗಿತ್ತು.