ಶ್ರೀಮಂಗಲ, ಅ. ೨೧: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದ ಮೂರನೆ ದಿನ ಕಲಾವಿದರಿಂದ ವಿವಿಧ ನೃತ್ಯ ಹಾಗೂ ಹಾಡುಗಾರಿಕೆಯೊಂದಿಗೆ ಕೊಡಗು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರಿAದ ನಡೆದ ಯೋಗ, ಧ್ಯಾನ ನೆರೆದಿದ್ದವರನ್ನು ಮಂತ್ರಮುಗ್ದರನ್ನಾಗಿಸಿತು. ಬದುಕಿನಲ್ಲಿ ಅತ್ಯವಶ್ಯಕವಾಗಿ ಅಳವಡಿಸಿಕೊಳ್ಳಬೇಕಾದ ಆಹಾರ ಪದ್ದತಿ, ಯೋಗ, ವ್ಯಾಯಾಮ ಹಾಗೂ ಜೀವನಕ್ರಮದ ಬಗ್ಗೆ ಯೋಗಗುರು ಅಳಮೇಂಗಡ ರಾಜಪ್ಪ ಮಾರ್ಗದರ್ಶನ ನೀಡಿದರು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗಗುರು ಅಳಮೇಂಗಡ ರಾಜಪ್ಪ ಇತ್ತೀಚೆಗೆ ಜನರು ಬದುಕಿನ ಜಂಜಾಟದಿAದ ಸೋತು ಹೋಗಿದ್ದು ನೆಮ್ಮದಿಯ ದಾರಿ ಹುಡುಕುವಲ್ಲಿ ವಿಫಲರಾಗುತ್ತಿದ್ದಾರೆ. ಈ ಸಮಸ್ಯೆಯ ಪರಿಹಾರಕ್ಕೆ ಯೋಗ, ಧ್ಯಾನ ಹಾಗೂ ಮನರಂಜನೆಯ ಮೊರೆಹೋಗುವ ಅವಶ್ಯಕತೆ ಇದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಲೇಖಕಿ ಪೋಡಮಾಡ ಭವಾನಿ ನಾಣಯ್ಯ ಮಾತನಾಡಿ, ಹತ್ತು ದಿನಗಳವರೆಗೆ ಜನೋತ್ಸವದ ರೀತಿಯಲ್ಲಿ ನಡೆಸುತ್ತಿರುವ ಈ ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ಆಡಳಿತ ಮಂಡಳಿಯ ಶ್ರಮ ಶ್ಲಾಘನೀಯ ಎಂದರು.

ಮತ್ತೋರ್ವ ಅತಿಥಿ ಕೋಟ್ರಮಡ ಮಂಜು ಮಾತನಾಡಿ, ಜನಾಂಗದ ಸಂಸ್ಕೃತಿಯ ಅಭಿವೃದ್ಧಿಗೆ ಅವಶ್ಯಕವಾಗಿರುವ ಕಾರ್ಯಕ್ರಮವನ್ನು ಮಾಡುತ್ತಿರುವ ಕೊಡವ ಸಮಾಜಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಅತಿಥಿ ಆಂಡಮಾಡ ಭರತ್ ಮಾತನಾಡಿ, ಯೋಗ ಹಾಗೂ ಧ್ಯಾನ ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕ. ಬಾಲ್ಯದಿಂದಲೇ ಇವೆರಡನ್ನು ಮೈಗೂಡಿಸಿಕೊಂಡರೆ ಹಲವು ಕಾಯಿಲೆಗಳಿಂದ ಮುಕ್ತರಾಗಬಹುದು ಎಂದರು.

ಮAದಮಡ ಗೀತ ಮಾತನಾಡಿ, ಈ ರೀತಿಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬದುಕು ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಚಂಗ್ರಾAದಿ ಪತ್ತಲೋದಿಯಂತಹ ಕಾರ್ಯಕ್ರಮವನ್ನು ಎಲ್ಲಾ ಕೊಡವ ಸಮಾಜದಲ್ಲೂ ಮಾಡುವುದರೊಂದಿಗೆ ಜನಾಂಗದ ಒಗ್ಗಟ್ಟು ಬಲಪಡಿಸುತ್ತಾ ಕೊಡವ ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.

ವೇದಿಕೆಯಲ್ಲಿ ಕೊಡವ ಸಮಾಜದ ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಸದಸ್ಯೆ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ನಿರ್ದೇಶಕರಾದ ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ, ಚಂಗುಲAಡ ಅಶ್ವಿನಿ ಸತೀಶ್ ನಿರೂಪಿಸಿ, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ವಂದಿಸಿದರು. ಖಜಾಂಚಿ ಚಂಗುಲAಡ ಸತೀಶ್ ಹಾಗೂ ನಿರ್ದೇಶಕಿ ತೀತೀರ ಅನಿತಾ ಸುಬ್ಬಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.