ಗೋಣಿಕೊಪ್ಪಲು, ಅ. ೨೧: ಕಾಯಿಲೆಗೆ ಮೂಲ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ‘ಪ್ಲಾನೆಟರಿ ಮೆಡಿಸನ್’ ಪ್ರಸ್ತಾಪದೊಂದಿಗೆ ಅಮೇರಿಕಾ ದೇಶದ ಫ್ಲೋರಿಡಾ ವೈದ್ಯಕೀಯ ವಿಶ್ವ ವಿದ್ಯಾನಿಲಯದ ಇನ್ಸಿ÷್ಟಟ್ಯೂಟ್ ಆಫ್ ಇನ್‌ಫೆಕ್ಷಿಯಸ್ ಡಿಸೀಸ್ ವಿಭಾಗದ ಮುಖ್ಯಸ್ಥ ಡಾ.ಗ್ಯಾರಿವಾಂಗ್ ಹಾಗೂ ಇದೇ ಸಂಸ್ಥೆಯಲ್ಲಿ ವೈದ್ಯರಾಗಿರುವ ಕೊಡಗಿನ ಡಾ.ಗೌತಮ್ ಸುಬ್ಬಯ್ಯ ವೀರಾಜಪೇಟೆಯ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಪರಿಸರ, ಮೂಲಭೂತ ಸೌಕರ್ಯಗಳು ಮತ್ತು ಇತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದರು.ಕಾಯಿಲೆಗಳಿಗೆ ಮೂಲ ಕಾರಣವನ್ನು ತಿಳಿದುಕೊಂಡು ಅದಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಫ್ಲೋರಿಡಾದಲ್ಲಿರುವ ಚಿಕಿತ್ಸಾ ಪದ್ಧತಿಯನ್ನು ವೀರಾಜಪೇಟೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಗಮಿಸಿದ ತಂಡ ಮೊದಲು ಅಮ್ಮತ್ತಿ ಆಸ್ಪತ್ರೆ,

(ಮೊದಲ ಪುಟದಿಂದ) ಪೊನ್ನಂಪೇಟೆಯ ಕೃಷಿ, ತೋಟಗಾರಿಕೆ ಹಾಗೂ ಇತರ ಸ್ಥಳಗಳಿಗೆ ತೆರಳಿ ಇಲ್ಲಿನ ಪರಿಸರವನ್ನು ಅಧ್ಯಯನ ನಡೆಸಿತು. ಅನಂತರ ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆಯ ಹಿರಿಯ ಸರ್ಜನ್ ಡಾ. ಸಿಂಪಿ ಹಾಗೂ ಇತರ ವೈದ್ಯರೊಂದಿಗೆ ವಿಚಾರ ವಿನಿಮಯ ನಡೆಸಿದರು.

ಫ್ಲೋರಿಡಾದಲ್ಲಿರುವ ‘ಪ್ಲಾನೆಟರಿ ಮೆಡಿಸಿನ್’ ವಿಭಾಗವನ್ನು ವೀರಾಜಪೇಟೆ ಕ್ಷೇತ್ರದಲ್ಲಿ ಸ್ಥಾಪನೆ ಮಾಡಲು ವೀರಾಜಪೇಟೆ ಕ್ಷೇತ್ರದ ಶಾಸಕ, ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿಶೇಷ ಆಸಕ್ತಿ ವಹಿಸಿದ್ದು, ಆಗಮಿಸಿದ ವೈದ್ಯರ ತಂಡದೊAದಿಗೆ ವಿವಿಧ ಭಾಗಕ್ಕೆ ಖುದ್ದಾಗಿ ತೆರಳಿ ಉಪಯುಕ್ತ ಮಾಹಿತಿ ನೀಡಿದರು.

ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ವೈದ್ಯರ ತಂಡವನ್ನು ಕರೆದೊಯ್ದ ಶಾಸಕ ಪೊನ್ನಣ್ಣ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವೈದ್ಯರ ತಂಡಕ್ಕೆ ಪರಿಚಯಿಸಿದರು. ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕ, ಸೇರಿದಂತೆ ರೋಗಿಗಳು ಚಿಕಿತ್ಸೆ ಪಡೆಯುವ ಕೊಠಡಿಗೆ ತೆರಳಿ ಇಲ್ಲಿನ ವ್ಯವಸ್ಥೆ ಬಗ್ಗೆ ವೀಕ್ಷಣೆ ನಡೆಸಿದರು.

ನಂತರ ಆಸ್ಪತ್ರೆಯ ಸಭಾಂಗಣದಲ್ಲಿ ಫ್ಲೋರಿಡಾದಿಂದ ಆಗಮಿಸಿದ ವೈದ್ಯರೊಂದಿಗೆ ಸಭೆ ನಡೆಸಿದ ಶಾಸಕ ಪೊನ್ನಣ್ಣ ಇಲ್ಲಿನ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದರು. ಸಭೆಯಲ್ಲಿ ಫ್ಲೋರಿಡಾ ಸಂಸ್ಥೆಯಲ್ಲಿ ವೈದ್ಯರಾಗಿರುವ ಕೊಡಗಿನ ಡಾ.ಗೌತಮ್ ಸುಬ್ಬಯ್ಯ ಅಲ್ಲಿನ ಚಿಕಿತ್ಸಾ ಕ್ರಮ, ಆರೋಗ್ಯ ಸೇವೆ ಕುರಿತು ಮಾಹಿತಿ ಒದಗಿಸಿದರು. ಭಾರತ ದೇಶದಲ್ಲಿ ಮೊದಲ ಪ್ರಯತ್ನವಾಗಿ ವೀರಾಜಪೇಟೆ ಕ್ಷೇತ್ರದಲ್ಲಿ ಕಾಯಿಲೆಗಳಿಗೆ ಔಷಧಿಗಳನ್ನು ಕಂಡು ಹಿಡಿಯುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ನೀಡಿದರು. ವಿಭಾಗ ಸ್ಥಾಪನೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ವೈದ್ಯರ ತಂಡಕ್ಕೆ ಭರವಸೆ ನೀಡಿದರು.

ಸಭೆಯಲ್ಲಿ ವೀರಾಜಪೇಟೆ ಪುರಸಭೆ ಸದಸ್ಯರಾದ ಎಸ್.ಹೆಚ್.ಮತೀನ್, ಪಟ್ಟಡ ರಂಜಿ ಪೂಣಚ್ಚ ರಾಜೇಶ್ ಪದ್ಮನಾಭ ಉಪಸ್ಥಿತರಿದ್ದರು. ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.