ನಾಪೋಕ್ಲು, ಅ. ೨೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಅಗಸ್ತೆö್ಯÃಶ್ವರ ದೇವಸ್ಥಾನ ಸಮಿತಿ, ಮಹಾದೇವ ಸ್ಪೋರ್ಟ್ಸ್ ಕ್ಲಬ್ ಬಲಮುರಿ ಸಂಯುಕ್ತ ಆಶ್ರಯದಲ್ಲಿ ಪುಣ್ಯಕ್ಷೇತ್ರ ಬಲಮುರಿಯಲ್ಲಿ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನಾಪೋಕ್ಲುವಿನ ರವಿ ಓಂಕಾರ್ ಮ್ಯೂಸಿಕ್ ತಂಡ ಹಾಗೂ ಸ್ಥಳೀಯ ಕಲಾವಿದರಾದ ಗುಡ್ಡೆರ ತೇಜು, ಮೇಡತನ ರಶ್ಮಿ, ಕೋಳಿಮಾಡು ಪ್ರಶಾಂತ್ ಅವರುಗಳು ಭಕ್ತಿಗೀತೆ ಗಾಯನ ನಡೆಸಿಕೊಟ್ಟರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಬೊಳ್ಳಚೆಟ್ಟಿರ ಪ್ರಕಾಶ್ ಕಾಳಪ್ಪ ಉದ್ಘಾಟಿಸಿದರು.

ಈ ಸಂದರ್ಭ ಕಾವೇರಿ ನದಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಾಸು ಎಂಬವರನ್ನು ರಕ್ಷಿಸಿ ಜೀವ ಉಳಿಸಿದ ಈಜು ತಜ್ಞ, ಸಾಹಸಿ ಎಂ.ಆರ್. ಬಿಪಿನ್ ಅವರನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಅಗಸ್ತೆö್ಯÃಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೊಂಗಿರAಡ ಸಾಧು ತಮ್ಮಯ್ಯ, ಅನ್ನದಾನ ಸಮಿತಿ ಅಧ್ಯಕ್ಷ ವಿಜಯ್ ಚೆಟ್ಟಿಚ್ಚ, ಮಹಾವಿಷ್ಣು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ, ಮಹಾದೇವ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ತೊತ್ತಿಯಂಡ ಬನ್ನಿ ಚಿಣ್ಣಪ್ಪ, ಉಪಾಧ್ಯಕ್ಷ ಗುಡ್ಡೇರ ಲಕ್ಸು, ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆರವಂಡ ಉಮೇಶ್ ಸೇರಿದಂತೆ ಇತರರು ಹಾಜರಿದ್ದರು. ಆಂಗೀರ ಕುಸುಮ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ವಂದಿಸಿದರು.