ಸಿದ್ದಾಪುರ, ಅ.೨೧: ಇತ್ತೀಚೆಗೆ ಮೈಸೂರಿನ ವಿಜಯನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ೨೭ನೇ ಶಿಟೋರಿಯೋ ಕರಾಟೆ ಡೋ ನ್ಯಾಷನಲ್ ಚಾಂಪಿಯನ್ ಶಿಪ್ ೨೦೨೪ ಪಂದ್ಯಾವಳಿಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿ ಟಿ.ಪಿ. ಭವ್ಯ ಕುಮಿಟೆ (ಫೈಟಿಂಗ್) ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡು ಅಂರ‍್ರಾಷ್ಟಿçÃಯ ಮಟ್ಟ ಹಾಗೂ ೧೬ನೇ ಏಷ್ಯಾ ಫೆಸಿಪಿಕ್ ಶಿಟೋರಿಯೋ ಕರಾಟೆ ಡೋ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾಳೆ.

ಭವ್ಯ ಟಿ.ಪಿ. ಇಂಜಲಗೆರೆ ನಿವಾಸಿ ಟಿ.ಎ. ಪ್ರಕಾಶ್ (ನಿವೃತ್ತ ಯೋಧ) ಹಾಗೂ ಟಿ.ಪಿ. ದಿವ್ಯ ದಂಪತಿಯ ಪುತ್ರಿ. ಈಕೆ ಅಮ್ಮತ್ತಿಯ ಝೆನ್ ಶಿಟೋರಿಯೋ ಕರಾಟೆ ಫೆಡರೇಷನ್ ತರಬೇತುದಾರ ವಿ.ಎನ್. ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂಜಿಲಗೆರೆ ಗ್ರಾಮದ ಶ್ರೀ ಮುತ್ತಪ್ಪ ಸೇವಾ ಸಮಿತಿಯಿಂದ ಕುಮಾರಿ ಭವ್ಯಳಿಗೆ ಸನ್ಮಾನಿಸಿ ಗೌರವಿಸಲಾಯಿತು.