ವೀರಾಜಪೇಟೆ, ಅ. ೨೧: ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಣ್ಣ ಮಳೆ ಬಂದರೂ ಮಟನ್ ಮಾರ್ಕೆಟ್ ಬಳಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತಿತ್ತು. ಈ ಹಿನ್ನೆಲೆ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಹಾಗೂ ಸದಸ್ಯರು ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಕೈಗೊಂಡರು.

ಅನಧಿಕೃತ ತಡೆಗಳಿಂದಾಗಿ, ಕೆಲವು ಕಡೆಗಳಲ್ಲಿ ಕೃತಕ ಪ್ರವಾಹ ನಿರ್ಮಾಣವಾಗುತ್ತಿತ್ತು. ಹೀಗಾಗಿ ಕೆಲ ವಾರ್ಡುಗಳ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆ ಹಾಗೂ ಚರಂಡಿಗಳ ಮೇಲೆ ಅನಧಿಕೃತವಾಗಿ ಸ್ಥಳೀಯ ನಿವಾಸಿಗಳು ನಿರ್ಮಿಸಿಕೊಂಡಿದ್ದ ಸ್ಲಾಬ್, ತಡೆಗೋಡೆಗಳನ್ನು ಒಡೆದು ಹಾಕಿ, ಮಳೆ ನೀರು ಸರಾಗವಾಗಿ ಹೊರ ಹೋಗುವಂತೆ ಮಾಡುವ ಸಲುವಾಗಿ ಅಂತಹ ಜಾಗಗಳಿಗೆ ಖುದ್ದು ಪರಿಶೀಲಿಸಿ ತೆರವು ಕಾರ್ಯಾಚರಣೆ ನಡೆಸಿದರು.