ವೀರಾಜಪೇಟೆ, ಅ. ೨೧: ನಗರದ ಎಸ್.ಎಸ್. ರಾಮಮೂರ್ತಿ ರಸ್ತೆಯ ಅಮಲ ಸ್ಪೆಷಾಲಿಟಿ ಕ್ಲಿನಿಕ್‌ಗೆ ರಸ್ತೆ ಬದಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅಸಮರ್ಪಕ ವಿಂಗಡಣೆ ಪ್ರಕರಣದಡಿಯಲ್ಲಿ ವೀರಾಜಪೇಟೆ ಪುರಸಭೆ ಇಂದು ದಂಡ ವಿಧಿಸಿತು. ಇಂದು ಮುಂಜಾನೆ ವೀರಾಜಪೇಟೆ ಪುರಸಭೆಯ ಅಧÀ್ಯಕೆÀ್ಷ ದೇಚಮ್ಮ ಕಾಳಪ್ಪ ಮತ್ತು ಸದಸ್ಯರಾದ ಡಿ.ಪಿ. ರಾಜೇಶ್ ಪದ್ಮನಾಭ ಹಾಗೂ ಪುರಸಭೆಯ ಸಿಬ್ಬಂದಿ ನಗರದಲ್ಲಿ ಕಸ ವಿಲೇವಾರಿ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡುತಿದ್ದ ವೇಳೆ ಅಮಲ ಕ್ಲಿನಿಕ್ ಎದುರಿನಲ್ಲಿ ಕಪ್ಪು ಪ್ಲಾಸ್ಟಿಕ್ ಚೀಲ ಗೋಚರಿಸಿದೆ. ಇದನ್ನು ಪರಿಶೀಲನೆ ಮಾಡಿದ ವೇಳೆ ಅದರಲ್ಲಿ ಉಪಯೋಗಿಸಿದ ಸಿರೇಂಜ್, ಸೂಜಿ, ಹ್ಯಾಂಡ್ ಗ್ಲೌಸ್ ಸೇರಿದಂತೆ ಕ್ಲಿನಿಕ್‌ನ ನಗದು ರಶೀದಿಗಳು ಸಿಕ್ಕಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ ನಗರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು, ಮಳಿಗೆ, ಕ್ಲಿನಿಕ್, ಹೊಟೇಲ್‌ಗಳು ತ್ಯಾಜ್ಯ ವಿಂಗಡಣೆ ಮಾಡಬೇಕು ಎಂಬ ನಿಯಮವಿದ್ದು, ಅದನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭ ಪುರಸಭೆಯ ಪರಿಸರ ಅಭಿಯಂತರರಾದ ರೀತು ಸಿಂಗ್, ಪ್ರಬಾರ ಅರೋಗ್ಯ ಅಧಿಕಾರಿ ಕೋಮಲ, ಪೌರಕಾರ್ಮಿಕರಾದ ಕವಿತಾ ಮತ್ತು ಸುಮಿತ್ರ ಹಾಜರಿದ್ದರು.