ಸಿದ್ದಾಪುರ, ಅ. ೨೧: ಸೈನಿಕರ ನಾಡು ಎಂದು ಖ್ಯಾತವಾಗಿರುವ ಕೊಡಗಿನಲ್ಲಿ ಯುವ ಜನತೆ ಶೂಟಿಂಗ್ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕೆಂದು ನಿವೃತ ಮೇಜರ್ ಜನರಲ್ ಬಾಚಮಂಡ ಕಾರ್ಯಪ್ಪ ಕರೆ ನೀಡಿದರು.

ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೩ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಅಲ್ಲಲ್ಲಿ ಶೂಟಿಂಗ್ ಸ್ಪರ್ಧೆಗಳು ನಡೆಯುತ್ತಿದೆ. ಶೂಟಿಂಗ್ ಸ್ಪರ್ಧೆಯಲ್ಲಿ ಯುವ ಜನತೆ ಭಾಗವಹಿಸಿದರೆ ಮುಂದೆ ಒಲಂಪಿಕ್ಸ್ ಸೇರಿದಂತೆ ಅಂರ‍್ರಾಷ್ಟಿçÃಯ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮ್ಮತ್ತಿ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ನಿವೃತ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ, ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವಿಭಿನ್ನವಾಗಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ರಾಜ್ಯದ ವಿವಿಧ ಭಾಗದಿಂದ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಮೂರು ವಿಭಾಗದಲ್ಲಿ ಪಂದ್ಯಾವಳಿ ನಡೆದಿದೆ ಎಂದರು.

ಈ ಸಂದರ್ಭ ಜಿ.ಪಂ ಮಾಜಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಬೆಳೆಗಾರರಾದ ಕೊಕ್ಕಲೆಮಾಡ ಧನು ತಿಮ್ಮಯ್ಯ, ಉದ್ದಪಂಡ ರಜತ್, ಅಸೋಸಿಯೇಷನ್ ಉಪಾಧ್ಯಕ್ಷರಾದ ನಿರಿ ನಾಣಯ್ಯ, ಕಾರ್ಯದರ್ಶಿ ಬೊಮ್ಮಂಡ ಚಕ್ರವರ್ತಿ ಪೊನ್ನಣ್ಣ, ಏರ್ ರೈಫಲ್ ವಿಭಾಗದಲ್ಲಿ ಚಿರಂತ್ ಪ್ರಥಮ, ವರುಣ್ ದ್ವಿತೀಯ ಹಾಗೂ ಕೇಚಿರ ಶಬ್ದ್ ತೃತೀಯ ಬಹುಮಾನ ಪಡೆದರು.

ಬಡ್ಡಿಂಗ್ ಶೂಟರ್ಸ್ ಪುರುಷರ ವಿಭಾಗದಲ್ಲಿ ಮಾಚಮಂಡ ಸ್ಮರಣ್ ಹಾಗೂ ಮಹಿಳೆಯರ ವಿಭಾಗದಲ್ಲಿ ಚೆರುವಾಳಂಡ ಅನನ್ಯ ಅಯ್ಯಪ್ಪ ವಿಜೇತರಾದರು. ವಿಜೇತರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.