ಎನ್‌ಕೌಂಟರ್ - ನಾಲ್ವರು ನಕ್ಸಲೀಯರ ಹತ್ಯೆ

ಮುಂಬೈ, ಅ. ೨೧: ಮಹಾರಾಷ್ಟçದ ಗಡ್ಚಿರೋಲಿ ಜಿಲ್ಲೆಯಲ್ಲಿ ಸೋಮವಾರ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕನಿಷ್ಠ ನಾಲ್ವರು ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರದ ಗಡಿ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ. ಗಡ್ಚಿರೋಲಿ ಪೊಲೀಸರ ಸಿ೬೦ ಕಮಾಂಡೋ ಮತ್ತು ಸಿಆರ್‌ಪಿಎಫ್ ತಂಡ ಕಾರ್ಯಾಚರಣೆ ನಡೆಸಿದೆ.

ಮೂರು ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

ಬೆಂಗಳೂರು, ಅ. ೨೧: ಸೆಕ್ಸ್ ವಿಡಿಯೋ ಪ್ರಕರಣ ಸಂಬAಧ ಜೈಲು ಪಾಲಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಬಿಗ್ ಶಾಕ್ ನೀಡಿದ್ದು, ಜೆಡಿಎಸ್ ನಾಯಕ ಸಲ್ಲಿಸಿದ್ದ ಮೂರು ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮೂರೂ ಪ್ರಕರಣಗಳಲ್ಲೂ ಜಾಮೀನು ತಿರಸ್ಕರಿಸಿದೆ. ಎರಡು ಅತ್ಯಾಚಾರ ಪ್ರಕರಣ ಮತ್ತು ಒಂದು ಮಹಿಳೆಯ ಅಶ್ಲೀಲ ದೃಶ್ಯ ಸೆರೆಹಿಡಿದ ಪ್ರಕರಣಕ್ಕೆ ಸಂಬAಧಿಸಿದ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇನ್ನೊಂದು ಅತ್ಯಾಚಾರ ಪ್ರಕರಣದ ಆದೇಶ ಪ್ರಕಟಿಸುವುದು ಬಾಕಿಯಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರು ಅತ್ಯಾಚಾರ ಮತ್ತು ಒಂದು ಲೈಂಗಿಕ ದೌರ್ಜನ್ಯ, ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡಿದ ಆರೋಪ ಸಂಬAಧ ಪ್ರತ್ಯೇಕವಾಗಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಮೂರು ಪ್ರಕರಣಗಳಲ್ಲಿ ಪ್ರಜ್ವಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ವಜಾ ಮಾಡಿದೆ.

೬೪ ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮರುನಿರ್ಮಾಣ!

ಪಂಜಾಬ್, ಅ. ೨೧: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯದ ಮರು ನಿರ್ಮಾಣಕ್ಕೆ ೧೦ ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಗಿದೆ. ೬೪ ವರ್ಷಗಳ ನಂತರ ಮೊದಲ ಹಂತದ ಮರು ನಿರ್ಮಾಣ ಕಾಮಗಾರಿ ಇದಾಗಿರಲಿದೆ. ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ), ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳನ್ನು ನೋಡಿಕೊಳ್ಳುವ ಫೆಡರಲ್ ಸಂಸ್ಥೆಯಾಗಿದ್ದು ಪಂಜಾಬ್‌ನ ರಾವಿ ನದಿಯ ಪಶ್ಚಿಮ ದಂಡೆಯ ನಗರವಾದ ನರೋವಾಲ್‌ನ ಜಫರ್ವಾಲ್ ಪಟ್ಟಣದಲ್ಲಿ ಬಾವೊಲಿ ಸಾಹಿಬ್ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದೆ. ೧೯೬೦ ರಲ್ಲಿ ಇಲ್ಲಿ ಆರಾಧನೆಯನ್ನು ನಿಷ್ಕಿçಯಗೊಳಿಸಲಾಗಿತ್ತು. ಪ್ರಸ್ತುತ, ನರೋವಾಲ್ ಜಿಲ್ಲೆಯಲ್ಲಿ ಯಾವುದೇ ಹಿಂದೂ ದೇವಾಲಯವಿಲ್ಲ, ಹಿಂದೂ ಸಮುದಾಯವು ತಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿಯೇ ಮಾಡಲು ಅಥವಾ ಧಾರ್ಮಿಕ ಆಚರಣೆಗಳಿಗಾಗಿ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ದೇವಾಲಯಗಳಿಗೆ ಪ್ರಯಾಣಿಸಬೇಕಾಗುತ್ತದೆ. ಪಾಕ್ ಧರ್ಮಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ರತನ್ ಲಾಲ್ ಆರ್ಯ ಮಾತನಾಡಿ, ಬಾವೊಲಿ ಸಾಹಿಬ್ ದೇವಾಲಯದ ಮೇಲೆ ಇಖಿPಃ ಯ ನಿಯಂತ್ರಣ ದೇವಾಲಯದಲ್ಲಿನ ಆರಾಧನೆಯನ್ನು ನಿಷ್ಕಿçಯಗೊಳಿಸಿತ್ತು. ನರೋವಾಲ್‌ನಲ್ಲಿ ೧,೪೫೩ ಕ್ಕಿಂತ ಹೆಚ್ಚು ಸಂಖ್ಯೆಯ ಹಿಂದೂ ಸಮುದಾಯಕ್ಕೆ ಪೂಜೆಗೆ ಮೀಸಲಾದ ಸ್ಥಳದ ಕೊರತೆಯಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಸ್ಥಾಪನೆಯ ನಂತರ, ನರೋವಾಲ್ ಜಿಲ್ಲೆಯಲ್ಲಿ ೪೫ ಹಿಂದೂ ದೇವಾಲಯಗಳು ಇದ್ದವು ಆದರೆ ಅವೆಲ್ಲವೂ ಕಾಲಾನಂತರದಲ್ಲಿ ಶಿಥಿಲಗೊಂಡಿವೆ.

ಮಳೆಯಿAದ ಹಾನಿ: ೫ ಸಾವಿರ ಕೋಟಿ ಬಿಡುಗಡೆಗೆ ಬಿಜೆಪಿ ಆಗ್ರಹ

ಬೆಂಗಳೂರು, ಅ. ೨೧: ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು ೫,೦೦೦ ಕೋಟಿ ರೂ. ಬಿಡುಗಡೆ ಮಾಡಲಿ. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ ೧,೦೦೦ ಕೋಟಿ ರೂ. ಬಿಡುಗಡೆಗೊಳಿಸಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು. ಬೆಂಗಳೂರಿನ ಸಿಲ್ಕ್ ಬೋರ್ಡ್ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭ ಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ಅನಾಹುತವಾಗಿದೆ ಎಂದು ಪರಿಶೀಲಿಸಬೇಕು. ಕಳೆದೊಂದು ತಿಂಗಳಿAದ ಪ್ರವಾಹ ಸಂಬAಧದ ಸಭೆಯೇ ನಡೆದಿಲ್ಲ. ಸರ್ಕಾರ ಕೂಡಲೇ ಸಭೆ ಕರೆದು ಕನಿಷ್ಠ ೫,೦೦೦ ಕೋಟಿ ರೂ. ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ವಿಶೇಷವಾಗಿ ೧,೦೦೦ ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ದಂಪತಿಗೆ ೪೭ ಲಕ್ಷ ರೂ ವಂಚಿಸಿದ ಪೊಲೀಸ್!

ಬೆಂಗಳೂರು, ಅ. ೨೧: ತಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ನಗರ ಸಶಸ್ತç ಮೀಸಲು ಪಡೆಯ (ಅಂಖ) ಹೆಡ್ ಕಾನ್‌ಸ್ಟೇಬಲ್ ವೊಬ್ಬರು ಮಹಿಳೆಯೊಬ್ಬರಿಗೆ ೪೭ ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಆರೋಪಿಯನ್ನು ನಗರದ ಸಿಎಆರ್ (ಕೇಂದ್ರ ವಿಭಾಗ) ನಲ್ಲಿರುವ ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ದೀಪಾ ಮತ್ತು ಇತರ ಇಬ್ಬರು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮಹಾಲಕ್ಷಿö್ಮ ಲೇಔಟ್ ನಿವಾಸಿ ಭಾಗ್ಯಮ್ಮ ದೂರು ದಾಖಲಿಸಿದ್ದಾರೆ. ೨೦೨೧ ರಲ್ಲಿ ಭಾಗ್ಯಮ್ಮ ಅವರು ಪ್ರಶಾಂತ್ ಕುಮಾರ್ ಅವರನ್ನು ಭೇಟಿಯಾದಾಗ, ತಾನು ಸರ್ಕಾರಿ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ನಿಮ್ಮ ಮಗ ಮತ್ತು ಮಗಳಿಗೆ ಸರ್ಕಾರಿ ಉದ್ಯೋಗವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಮೂರು ತಿಂಗಳೊಳಗೆ ನೇರ ನೇಮಕಾತಿಯ ಮೂಲಕ ಅವರ ಮಗನಿಗೆ ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ಹುದ್ದೆ ಮತ್ತು ಅವರ ಮಗಳಿಗೆ ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ) ಹುದ್ದೆ ಸಿಗಲಿದೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಯಾಗಿ ಎಫ್ ಡಿಎ ಹುದ್ದೆಗೆ ೨೫ ಲಕ್ಷ ಹಾಗೂ ಎಸ್ ಡಿಎ ಹುದ್ದೆಗೆ ೧೫ ಲಕ್ಷ ರೂಪಾಯಿ ನೀಡಲು ಮಹಿಳೆ ಮತ್ತು ಆಕೆಯ ಪತಿ ನಗರದ ಸಹಕಾರಿ ಬ್ಯಾಂಕ್‌ನಿAದ ಸಾಲ ಪಡೆದು ಕಂತುಗಳಲ್ಲಿ ಹಣವನ್ನು ಪಾವತಿಸಿದ್ದಾರೆ. ಕಳೆದ ಏಪ್ರಿಲ್ ೨೦೨೪ ರಲ್ಲಿ, ಪ್ರಶಾಂತ್ ಕುಮಾರ್ ಭಾಗ್ಯಮ್ಮ ಅವರ ಮಗ ಪ್ರಶಾಂತ್ ಅವರನ್ನು ಎಂಎಸ್ ಬಿಲ್ಡಿಂಗ್ ಬಳಿ ಭೇಟಿಯಾಗುವಂತೆ ಹೇಳಿ ಅವರಿಗೆ ನೇಮಕಾತಿ ಪತ್ರಗಳನ್ನು ನೀಡಿದರು, ನಂತರ ಅದನ್ನು ಪರಿಶೀಲನೆ ಮಾಡಿ ನೋಡಿದಾಗ ನಕಲಿ ಎಂದು ತಿಳಿದುಬಂದಿದೆ. ಭಾಗ್ಯಮ್ಮ ಅವರ ಮನೆಯವರು ಕುಮಾರ್ ಮತ್ತು ದೀಪಾ ಅವರನ್ನು ಈ ಬಗ್ಗೆ ಕೇಳಿ ಆಕ್ಷೇಪಿಸಿದಾಗ ಚೆಕ್ ನೀಡಿದರು. ಆದರೆ, ಭಾಗ್ಯಮ್ಮ ಅದನ್ನು ಬ್ಯಾಂಕ್‌ಗೆ ಹಾಕಿ ಹಣ ಪಡೆಯಲು ಯತ್ನಿಸಿದಾಗ ಚೆಕ್ ಬೌನ್ಸ್ ಆಗಿದೆ. ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.