ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಅ. ೨೧: ವಿಶಿಷ್ಟವಾದ ಆಚಾರ ವಿಚಾರಗಳು ಸಂಸ್ಕೃತಿಯೊAದಿಗೆ ಪಾರಂಪರಿಕ ವಸ್ತುಗಳಿಂದಲೂ ವಿಶೇಷತೆ ಹೊಂದಿರುವ ಕೊಡಗಿನ ಕೊಡವ ಸಂಸ್ಕೃತಿಯ ಪ್ರತಿಬಿಂಬವಾಗಿ ತಮಿಳುನಾಡು ರಾಜ್ಯದ ಚೆನ್ನೆöÊನಲ್ಲಿ ಹೊಸತೊಂದು ಪ್ರಯತ್ನ ನಡೆದಿದೆ.

ಚೆನ್ನೆöÊಯಲ್ಲಿ ದಕ್ಷಿಣ ಚಿತ್ರ ಎಂಬ ಸ್ಥಳದಲ್ಲಿ ದಕ್ಷಿಣ ಭಾರತದ ವಿಶೇಷತೆಗಳನ್ನು ಎತ್ತಿ ಹಿಡಿಯುವ ವಿಚಾರಧಾರೆಗಳನ್ನು ಒಳಗೊಂಡAತೆ ವಿಶಾಲ ಆವರಣದಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದೆ. ಇದು ಕೇವಲ ಒಂದು ಕಟ್ಟಡದಲ್ಲಿರುವಂತದ್ದಲ್ಲ ಬದಲಾಗಿ ಬೇರೆ ಬೇರೆ ಮಾದರಿಗಳು, ವಿವಿಧೆಡೆಯ ವಿಶೇಷತೆಗಳನ್ನು ಹಲವು ಮನೆಗಳ ಮಾದರಿ ಅಥವಾ ಕಟ್ಟಡದ ಮಾದರಿಯಲ್ಲಿ ಸಜ್ಜುಗೊಂಡಿರುವ ಕೇಂದ್ರವಾಗಿದೆ. ಈಗಾಗಲೇ ಈ ಆವರಣದಲ್ಲಿ ಇಂತಹ ೧೮ ಮನೆಗಳಿದ್ದು, ಇದೀಗ ೧೯ನೇ ಮನೆಯಾಗಿ ಕೊಡವ ಐನ್‌ಮನೆಯೊಂದು ತಲೆ ಎತ್ತಿದೆ. ಇದರ ಉದ್ಘಾಟನೆ ಅಕ್ಟೋಬರ್ ೨೩ (ನಾಳೆ) ಹಾಗೂ ೨೪೩ ರಂದು ಹಲವು ವಿಶೇಷತೆಗಳೊಂದಿಗೆ ನಡೆಯಲಿದೆ. ಇದರ ಹಿಂದಿನ ರೂವಾರಿ ಯಾಗಿರುವದು ಈ ಹಿಂದೆ ಕೇಂದ್ರ ಸರಕಾರ ದಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯದರ್ಶಿ ಯಾಗಿದ್ದ ಕೊಡಗಿನವರೇ ಆದ ಐ.ಎ.ಎಸ್. ಅಧಿಕಾರಿ ರತಿ ವಿನಯ್ ಜಾ ಅವರು. ಇದು ಇವರ ಪರಿಕಲ್ಪನೆಯೊಂದಿಗೆ ದಕ್ಷಿಣ ಚಿತ್ರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಕೊಡಗಿನಿಂದಲೇ ಅವನತಿಗೊಂಡಿದ್ದ ಐನ್‌ಮನೆಯೊಂದರ ಮೂಲ ಮರಮುಟ್ಟುಗಳನ್ನು ಸಾಗಿಸಿ ಅದನ್ನು ಬಳಸಿ ಐನ್‌ಮನೆಯನ್ನು ನಿರ್ಮಿಸಿ ರುವುದು ಅಲ್ಲಿನ ವಿಶೇಷತೆಯಾಗಿದೆ.

ಹೊಸದಾಗಿ ತಲೆ ಎತ್ತಿದೆ

ಕೋಡಿರ ಐನ್‌ಮನೆ

ಕೊಡಗಿನ ಅರಪಟ್ಟು ಗ್ರಾಮದಲ್ಲಿ ಕೋಡಿರ ಕುಟುಂಬ ಇದೆ. ಈ ಕುಟುಂಬದ ಮುಖ್ಯ ಐನ್‌ಮನೆ ಈಗಲೂ ಉತ್ತಮ ಸ್ಥಿತಿಯಲ್ಲೇ ಈ ಹಿಂದಿನAತೆ ಇದೆ. ಆದರೆ ಕೋಡಿರ ಕುಟುಂಬಕ್ಕೆ ಅದೇ ಗ್ರಾಮದಲ್ಲಿ ಅವರ ಮತ್ತೊಂದು ಭಾಗವಿದ್ದು (ಕೊಪ್ಪ) ಅಲ್ಲಿ ಇದ್ದ ಮನೆ ಅವನತಿಗೊಂಡಿತ್ತು. ಈ ಕಾರಣದಿಂದ ಪುರಾತನವಾಗಿದ್ದ ಈ ಮನೆಯನ್ನು ಕೆಡವಿ ಈ ಕುಟುಂಬದವರು ಮತ್ತೊಂದು ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭ ತೆರವು ಮಾಡಲಾಗಿದ್ದ ಪುರಾತನ ಮನೆಯ ಮರಮುಟ್ಟುಗಳನ್ನು ಅದರ ಮೂಲಸ್ವರೂಪದಲ್ಲೇ ರತಿ ವಿನಯ್ ಜಾ ಅವರ ಮೂಲಕ ಕೆಲವು ಕಂಪೆನಿಗಳ ಪ್ರಾಯೋಜಕತ್ವದ ಮೂಲಕ ಖರೀದಿಸಿ ಚೆನ್ನೆöÊನ ದಕ್ಷಿಣ ಚಿತ್ರಕ್ಕೆ ಸಾಗಿಸಲಾಗಿದೆ. ಇದು ಆರಂಭವಾದದ್ದು ೨೦೨೨ರಲ್ಲಿ. ಇದೀಗ ಇದೇ ಮರಮುಟ್ಟುಗಳು ಕಂಬಗಳನ್ನು ಬಳಸಿ ಕೊಡವ ವಿಶೇಷತೆಗಳ ಪ್ರತಿಬಿಂಬಿಸಲು ಐನ್‌ಮನೆ ಮಾದರಿ ನಿರ್ಮಾಣ ವಾಗಿದೆ.

(ಮೊದಲ ಪುಟದಿಂದ)

ದಕ್ಷಿಣ ಚಿತ್ರ ಕುರಿತು

ದಕ್ಷಿಣ ಚಿತ್ರ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಮೆಡ್ರಾಸ್ ಕ್ರಾö್ಯಫ್ಟ್ ಫೌಂಡೇಶನ್‌ನ ಮೂಲಕ ನಿರ್ವಹಿಸಲ್ಪಡುತ್ತಿದೆ. ಇಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪುರಾತನ ಕಾಲದ ಮನೆಗಳು, ಬಳಸಲ್ಪಡುತ್ತಿದ್ದ ವಸ್ತುಗಳು, ಸಂಸ್ಕೃತಿಯ ಪ್ರತೀಕವಾದ ಇನ್ನಿತರ ವಿಶೇಷತೆಗಳನ್ನು ಪ್ರತಿಬಿಂಬಿಸಲಾಗುತ್ತಿದೆ. ಕಳೆದ ೩೫ ವರ್ಷಗಳಿಂದ ಇದು ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಈ ಸಂಸ್ಥೆ ಈಗಾಗಲೇ ಇಂತಹ ೧೮ ಮನೆಗಳನ್ನು ಹೊಂದಿದೆ. ಇದೀಗ ೧೯ನೇಯ ಮನೆಯಾಗಿ ಕೊಡವ ಐನ್‌ಮನೆ ಸೇರ್ಪಡೆಗೊಳ್ಳುತ್ತಿದೆ.

ಈ ಮ್ಯೂಸಿಯಂ ಕೊಡವ ಜನಾಂಗದ ವಿಶೇಷತೆಗಳಾದ ವಿಶಿಷ್ಟ ಸಂಪ್ರದಾಯ, ಹೆರಿಟೇಜ್, ಸಾಂಪ್ರದಾಯಿಕ ಧಿರಿಸು, ಆಹಾರ ಪದ್ಧತಿ, ಕೊಡಗಿನ ಭೌಗೋಳಿಕತೆ, ಪ್ರಕೃತಿಯ ಆರಾಧನೆ, ಜೀವಸಂಕುಲದAತಹ ಅಂಶಗಳನ್ನು ಒಳಗೊಂಡಿರುತ್ತದೆ.

ಉದ್ಘಾಟನೆ ಸಮಾರಂಭದ ಸಂದರ್ಭ ಕೊಡವ ಮ್ಯೂಸಿಕ್, ನೃತ್ಯ, ಜನಪದ ಕಲೆಗಳ ಪ್ರದರ್ಶನ ಕೊಡಗಿನಿಂದ ಇಲ್ಲಿಗೆ ತೆರಳುತ್ತಿರುವ ತಂಡದಿAದ ಪ್ರದರ್ಶನಗೊಳ್ಳಲಿರುವುದಾಗಿ ರತಿ ವಿನಯ್ ಜಾ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಇವರು ಹಾಗೂ ತಂಡದಿAದ ಸಂದೂಕ ಹೆಸರಿನ ವರ್ಚುವಲ್ ಮ್ಯೂಸಿಯಂ ಪ್ರಾರಂಭಿಸಲಾಗಿದ್ದು, ಆನ್‌ಲೈನ್‌ನಲ್ಲಿ ಇದು ಜನಪ್ರಿಯಗೊಳ್ಳುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ.

ದಕ್ಷಿಣ ಚಿತ್ರದಲ್ಲಿನ ಕೊಡವ ಐನ್‌ಮನೆ ನಿರ್ಮಾಣ ಹಾಗೂ ಮ್ಯೂಸಿಯಂ ಪ್ರಾರಂಭಕ್ಕೆ ಸಿ.ಎಸ್.ಆರ್ (ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸ್ಬಿಲಿಟಿ) ನಿಧಿಯಡಿ ಹೂಂಡಾಯ್ ಮೋಟರ‍್ಸ್, ಮೋಬಿಸ್ ಇಂಡಿಯಾ ಫೌಂಡೇಶನ್‌ನಿAದ ಪ್ರಾಯೋಜಕತ್ವ ಹಾಗೂ ಸಹಕಾರ ದೊರೆತಿರುವುದಾಗಿ ರತಿ ವಿನಯ್ ಜಾ ತಿಳಿಸಿದ್ದಾರೆ.