ಕೋವರ್‌ಕೊಲ್ಲಿ ಇಂದ್ರೇಶ್
ಕೊಚ್ಚಿನ್, ಅ. ೨೪ : ದೇಶೀ ಮಾರುಕಟ್ಟೆಯಲ್ಲಿ ಕಾಳು ಮೆಣಸಿನ ದರವು ಎರಡು ವಾರಗಳಲಿ ಕಿಲೋಗೆ
೧೯ ರೂಪಾಯಿಗಳಷ್ಟು ಕುಸಿತ ಕಂಡಿದೆ. ಕಳೆದ ವಾರದಲ್ಲಿಯೇ ಕಿಲೋಗೆ ರೂ. ೧೧ ಕುಸಿತವಾಗಿದೆ, ಕಳೆದ ಐದು ವಾರಗಳಲ್ಲಿ ಒಟ್ಟು ಕುಸಿತವು ಕೆಜಿಗೆ ರೂ. ೩೫ ರಷ್ಟು ಕುಸಿದಿದೆ.
(Souಣh ಂsiಚಿಟಿ ಈಡಿee ಖಿಡಿಚಿಜe ಂಡಿeಚಿ ) SಂಈಖಿA ಅಡಿಯಲ್ಲಿ ೮ ಶೇಕಡಾ ಸುಂಕದ ಅಡಿಯಲ್ಲಿ ಶ್ರೀಲಂಕಾದಿAದ ಆಮದು ಮಾಡಿದ ಉತ್ಪನ್ನಗಳ ಬೃಹತ್ ಆಗಮನವು ಬೆಲೆ ಕುಸಿತಕ್ಕೆ ಕಾರಣವೆಂದು ಬೆಳೆಗಾರ ಸಂಘಟನೆಗಳು ಆರೋಪಿಸಿವೆ. ಕೊಚ್ಚಿ ಟರ್ಮಿನಲ್ ಮಾರುಕಟ್ಟೆಯಲ್ಲಿ ಅನ್‌ಗಾರ್ಬಲ್ಡ್ ಕಿಲೋಗೆ ರೂ. ೬೨೭ ಮತ್ತು ಗಾರ್ಬಲ್ಡ್ಗೆ ರೂ. ೬೪೭ ರಂತೆ ಬೆಲೆಗಳು ಇವೆ. ಕೊಚ್ಚಿಯ ಕಾಳುಮೆಣಸಿನ ವ್ಯಾಪಾರಿ ಕಿಶೋರ್ ಶಾಮ್‌ಜಿ, ಮುಂಬೈನಿAದ ಬಂದಿರುವ ಶ್ರೀಲಂಕಾದ ಕಾಳುಮೆಣಸು ಲಭ್ಯತೆಯೊಂದಿಗೆ ಬಹುತೇಕ
ಎಲ್ಲಾ ಮಾರುಕಟ್ಟೆಗಳು ತುಂಬಿವೆ ಮತ್ತು ದಕ್ಷಿಣದ ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾದ ಆಮದಿನ ಕಾರಣದಿಂದ ಸ್ಥಳೀಯವಾಗಿ ಬೆಳೆದ ಕಾಳುಮೆಣಸಿನ ಬೆಲೆ ಮೇಲೆ ಮತ್ತಷ್ಟು ಒತ್ತಡವನ್ನು ಹಾಕಿದ್ದು ಇದು ದರ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ದಕ್ಷಿಣದ ಎಲ್ಲಾ ರಾಜ್ಯಗಳಲ್ಲಿ ಕಾಳುಮೆಣಸು ಬೆಳೆಯುತ್ತಿರುವ ಬೆಳೆಗಾರರು ತಮ್ಮ ಸ್ಟಾಕ್ ಅನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
ಬೆಲೆ ಚೇತರಿಕೆಯ ನಿರೀಕ್ಷೆಯಲ್ಲಿ ಕಾಳುಮೆಣಸು ದಾಸ್ತಾನು ಇಟ್ಟಿದ್ದ ರೈತರ ಸಂಘಗಳು ಸಹ ತಮ್ಮ ದಾಸ್ತಾನುಗಳನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬAದಿದೆ.
(ಮೊದಲ ಪುಟದಿಂದ) ಅಂಕಿಅAಶಗಳನ್ನು ಉಲ್ಲೇಖಿಸಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಿAದ ಒಟ್ಟು ೧೦,೪೩೩ ಟನ್ ಆಮದು ಆಗಿದ್ದು ಇತರ ಉತ್ಪಾದಕ ದೇಶಗಳಿಂದ ಒಟ್ಟು ೧೨,೬೦೬ ಟನ್ ಆಮದಾಗಿದೆ.
ಶ್ರೀಲಂಕಾ ವಾರ್ಷಿಕವಾಗಿ ೨೫ ಸಾವಿರ ಟನ್ ಉತ್ಪಾದನೆ ಮಾಡುತ್ತಿದ್ದು ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಕಾಳು ಮೆಣಸನ್ನು ರಫ್ತು ಮಾಡಲೇ ಬೇಕಿದೆ. ಏಕೆಂದರೆ ಅಲ್ಲಿನ ಆಂತರಿಕ ಬಳಕೆ ಕಡಿಮೆ ಇದೆ. ತಮ್ಮ ಹೆಚ್ಚುವರಿ ದಾಸ್ತಾನುಗಳನ್ನು ಮಾರಾಟ ಮಾಡಲು ಅವರು ಭಾರತದತ್ತ ನೋಡುತ್ತಿದ್ದಾರೆ. ಆದರೆ ಆಮದು ಮಾಡಲಾದ ವಸ್ತುವು ಕಡಿಮೆ ಪ್ರಮಾಣದ ಸಾಂದ್ರತೆ, ಹೆಚ್ಚಿನ ಶೇಕಡಾವಾರು ತೇವಾಂಶ ಮತ್ತು ಶಿಲೀಂಧ್ರದ ಉಪಸ್ಥಿತಿಯನ್ನು ಹೊಂದಿದೆ ಮತ್ತು ಇದು ಭಾರತದಲ್ಲಿ ಉತ್ಪಾದಿಸಿದ ಮೆಣಸಿಗೆ ಬೆಲೆಗಳು ಕುಸಿಯಲು ಕಾರಣವಾಗುವ ಅಂಶವಾಗಿದೆ ಭಾರತದ ಒಟ್ಟು ಉತ್ಪಾದನೆ ೭೦ ಸಾವಿರ ಟನ್‌ಗಳಷ್ಟಿದ್ದು ಇದರಲ್ಲಿ ಶೇಕಡಾ ೪೫ ರಷ್ಟು ಕರ್ನಾಟಕದ ಪಾಲು ಆಗಿದೆ.
ಭಾರತೀಯ ಕಾಳುಮೆಣಸು ಮತ್ತು ಮಸಾಲೆ ವ್ಯಾಪಾರಿಗಳ ಒಕ್ಕೂಟದ ಕೇರಳ ಘಟಕವು ದೇಶೀಯ ರೈತರ ಹಿತಾಸಕ್ತಿಗಳಿಗೆ ಮಾರಕ ಆಗಿರುವ ಇಂತಹ ಆಮದುಗಳನ್ನು ತಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ. ಆಮದು ನೀತಿಯಲ್ಲಿನ ಲೋಪದೋಷಗಳು ಮರು-ರಫ್ತು ಮಾಡಲು ಉದ್ದೇಶಿಸಿರುವ ಆಮದು ಮಾಡಿದ ಕಾಳುಮೆಣಸನ್ನು ದೇಶೀಯ ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಒಕ್ಕೂಟವು ಆರೋಪಿಸಿದೆ.
ಭಾರತದೊಳಗೆ ಮೆಣಸನ್ನು ಆಮದು ಮಾಡಿಕೊಂಡು ಅದನ್ನು ಮರು-ರಫ್ತು ಮಾಡಲು ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಆರು ತಿಂಗಳ ಅವಧಿಯನ್ನು ನೀಡಿದೆ. ಇದು ಕಾಳುಮೆಣಸಿನಂತಹ ಸೂಕ್ಷö್ಮ ವಸ್ತುವಿನ ಆಮದು-ರಫ್ತು ನೀತಿಯಲ್ಲಿನ ಪ್ರಮುಖ ವೈಪರೀತ್ಯಗಳಲ್ಲಿ ಒಂದಾಗಿದೆ. ಈ ಆರು ತಿಂಗಳು ದಾಸ್ತಾನು ಇಡುವ ಅನುಮತಿಯಿಂದಾಗಿ ಮರು ರಫ್ತು ಮಾಡಲು ಆಮದು ಮಾಡಿಕೊಂಡ ವ್ಯಾಪಾರಿಗಳು ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುತಿದ್ದಾರೆ. ಇದನ್ನು ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಸಂಘಟನೆಗಳು ಒತ್ತಾಯಿಸಿವೆ.