ನಾಪೋಕ್ಲು, ಅ. ೨೫: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್.ಎಸ್.ಎಫ್. ನಾಪೋಕ್ಲು ಶಾಖೆ ವತಿಯಿಂದ ವಿಷನ್ ಸ್ಟಿçಂಗ್ ಫೌಂಡೇಶನ್ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ನಾಫೋಕ್ಲು ಪಟ್ಟಣದ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಎಸ್.ವೈ.ಎಸ್. ಮಡಿಕೇರಿ ಶಾಖೆಯ ಪ್ರಮುಖರಾದ ಮುನಿರ್ ಮಲ್ಲಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸ್.ವೈ.ಎಸ್. ರಾಜ್ಯ ಅಧ್ಯಕ್ಷ ಅಬ್ದುಲ್ ಅಫಿಲ್ ಸಅದಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಲು ಮುಖ್ಯ. ಅದರಲ್ಲೂ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು.

ವಿಷನ್ ಸ್ಟಿçಂಗ್ ಫೌಂಡೇಶನ್‌ನ ಅವಿನಾಶ್ ಮಾತನಾಡಿ, ಸಾರ್ವಜನಿಕರಿಗೆ, ಕಾಫಿ ಹಾಗೂ ಟೀ ತೋಟ ಕಾರ್ಮಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡಲಾಗುತ್ತಿದೆ. ಶಸ್ತçಚಿಕಿತ್ಸೆ ಅಗತ್ಯ ಇದ್ದವರಿಗೆ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಅಗತ್ಯ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ ಎಂದರು.

ಕರ್ನಾಟಕ ಮುಸ್ಲಿಂ ಜಮಾಅತ್ ಮಾಜಿ ಅಧ್ಯಕ್ಷ ಮನ್ಸೂರ್ ಅಲಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭ ಎಸ್.ಎಸ್.ಎಫ್. ಅಧ್ಯಕ್ಷ ಯೂನಸ್ ಪಿ.ಯು., ಎಸ್.ವೈ.ಎಸ್. ಅಧ್ಯಕ್ಷ ಅಬ್ಬಾಸ್ ಬಿ.ಎ., ಅರಫತ್ ಪಿ.ಎಂ., ಅಬ್ದುಲ್ ರಹಮಾನ್ ಹಾಜಿ, ರಹೀಮ್ ಮಾಸ್ಟರ್, ಅಜಿದ್ ಪಿ.ಎಂ., ಯೂನಸ್ ಅಬ್ದುಲ್ ರೆಹಮಾನ್ ಎ.ಇ., ಶಾಹಿದ್ ಇಮಾಮ, ಆಸೀಫ್ ಎಂ.ಎ., ಅಬ್ದುಲ್ ಅಜೀಜ್, ಶಾಹಿದ್, ಚಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.