ಮಡಿಕೇರಿ, ಅ. ೨೫: ದಲಿತ ಸಮುದಾಯಕ್ಕೆ ಸಂಬAಧಿಸಿದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವದಾಗಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಹೇಳಿದರು.

ಗೋಣಿಕೊಪ್ಪದ ಆರ್.ಎಂ.ಸಿ. ಸಭಾಂಗಣದಲ್ಲಿ ದಲಿತ ಆದಿವಾಸಿ ಸಮುದಾಯಗಳ ಅಭಿವೃದ್ಧಿ ಮತ್ತು ಸಾಂವಿಧಾನಿಕ ಹಕ್ಕುಗಳ ಕುರಿತು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಜನಾಂಗದವರ ಅಭಿಪ್ರಾಯ ಸಂಗ್ರಹಿಸಿದ ನಾಗಮೋಹನ ದಾಸ್ ಅವರು, ಸಮಸ್ಯೆಗಳ ಬಗ್ಗೆ ಲಿಖಿತ ರೂಪದಲ್ಲಿ ಗಮನಕ್ಕೆ ತಂದಲ್ಲಿ ಸಂಬAಧಿಸಿದ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷÀ ಕೃಷ್ಣಪ್ಪ ವಹಿಸಿದ್ದರು. ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ, ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ರಮೇಶ ಹೆಚ್.ಬಿ., ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಹೆಚ್.ಬಿ. ರಮೇಶ್, ಶಿವಣ್ಣ ಹೆಚ್.ಆರ್., ಗಣೇಶ ವೈ.ಕೆ., ಗಿರಿಜನ ಲ್ಯಾಂಪ್ ಸೊಸೈಟಿ ಅದ್ಯಕ್ಷ ಮಣಿ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಜಿನಿಕಾಂತ್ ವಿ.ಆರ್., ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ಸತೀಶ್ ಹೆಚ್.ಬಿ., ಕಾನೂನು ಸಲಹೆಗಾರ ಕೆ.ವಿ. ಸುನಿಲ್, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ನಾಗೇಶ, ತಾಲೂಕು ಸಂಘಟನಾ ಸಂಚಾಲಕ ಹಾಗೂ ಗಣೇಶ, ನಿತೇಶ್, ಸುರೇಶ್, ರಾಜು, ಇನ್ನಿತರರು ಭಾಗವಹಿಸಿದ್ದರು. ಸತೀಶ ಹೆಚ್. ಬಿ. ಸ್ವಾಗತಿಸಿದರು.