ಕಣಿವೆ, ಅ. ೨೫: ಫ್ರೂಟ್ ತಂತ್ರಾAಶದಲ್ಲಿ ಸೇರ್ಪಡೆಯಾಗದ ಕಾರಣ ಅನೇಕ ರೈತರು ಸರ್ಕಾರದ ಸೌಲಭ್ಯಗಳು, ಬ್ಯಾಂಕುಗಳಿAದ ಸಾಲ ಸೌಲಭ್ಯ, ಕೃಷಿ ಇಲಾಖೆಯಿಂದ ಪರಿಕರಗಳು ಮೊದಲಾದ ಪ್ರಯೋಜನಗಳನ್ನು ಪಡೆದು ಕೊಳ್ಳಲು ಅನಾನುಕೂಲವಾಗುತ್ತಿರುವ ಬಗ್ಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕಂದಾಯ ಇಲಾಖೆ ಪ್ರಧಾನ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಕೂಡಿಗೆ ಗ್ರಾ.ಪಂ. ಸದಸ್ಯರೂ ಆದ ಕಾಂಗ್ರೆಸ್ ಪಕ್ಷದ ಮುಖಂಡ ಅಸಂಘಟಿತ ಕಾರ್ಮಿಕ ಘಟಕದ ಕೊಡಗು ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್ ಅವರ ನೇತೃತ್ವದಲ್ಲಿ ಶಾಸಕ ಮಂತರ್ ಗೌಡ ಅವರ ಮುಖಾಂತರ ಕಂದಾಯ ಇಲಾಖೆಯ ಪ್ರಧಾನ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕಂದಾಯ ಇಲಾಖೆಯ ಆಯುಕ್ತರು ಈ ಬಗ್ಗೆ ಪರಾಮರ್ಶಿಸಲಾಗುವುದು. ಸರ್ಕಾರದ ಸೌಲಭ್ಯಗಳಿಂದ ಹೊರಗುಳಿದ ರೈತರ ಪಟ್ಟಿ ಮಾಡಿ ಕೂಡಲೇ ಫ್ರೂಟ್ ತಂತ್ರಾAಶಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ಕೆಪಿಸಿಸಿ ಸದಸ್ಯ ಬೇಳೂರಿನ ಯಾಕುಬ್, ಭುವನಗಿರಿ ಗಿಡ್ಡಯ್ಯ, ಮಲ್ಲೇನಹಳ್ಳಿ ವೀರಭದ್ರ, ವಿಜಯನಗರ ಶಿವಕುಮಾರ್, ಅರುಣ್, ಕೆ.ಆರ್. ಗಣೇಶ್, ದೊಡ್ಡತ್ತೂರಿನ ಪಿ.ಡಿ. ಸುಂದರ ಹಾಗೂ ಭರತ್ ಮೊದಲಾದವರಿದ್ದರು.