ಗೋಣಿಕೊಪ್ಪಲು, ಅ. ೨೫: ಮೈಸೂರು ವಿಭಾಗೀಯ ಮಟ್ಟದ ಹಾಕಿಯಲ್ಲಿ ಕೊಡಗು ತಂಡ ಎಲ್ಲಾ ವಿಭಾಗದ ಪಂದ್ಯವನ್ನು ಗೆದ್ದು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಹಾಗೂ ಪ್ರಗತಿ ಶಾಲೆ ವೀರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಮೈಸೂರು ವಿಭಾಗದಿಂದ ವಿವಿಧ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿ ಅಂತಿಮವಾಗಿ ಹಾಗೂ ಪ್ರಗತಿ ಶಾಲೆ ವೀರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಮೈಸೂರು ವಿಭಾಗದಿಂದ ವಿವಿಧ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿ ಅಂತಿಮವಾಗಿ ಕೊಡಗು ತಂಡ ಎಲ್ಲಾ ವಿಭಾಗಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿಕೊಂಡಿತು.
೧೪ ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್ ಪಂದ್ಯಾವಳಿಯಲ್ಲಿ ಹಾಸನ ತಂಡವನ್ನು ೫-೦ ಗೋಲುಗಳಿಂದ ಮಣಿಸಿ ಕೊಡಗು ತಂಡ ಗೆಲುವು ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ೧-೦ ಅಂತರದಲ್ಲಿ ಹಾಸನ ತಂಡವನ್ನು ಮಣಿಸಿ ಕೊಡಗು ಗೆಲುವಿನ ನಗೆ ಬೀರಿತು.
೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ೭-೦ ಗೋಲುಗಳ ಅಂತರದಲ್ಲಿ ಮೈಸೂರು ತಂಡವನ್ನು ಪರಾಭವಗೊಳಿಸಿ ಕೊಡಗು ತಂಡ ಚಾಂಪಿಯನ್ ಆಯಿತು. ಬಾಲಕಿಯರ ವಿಭಾಗದಲ್ಲಿ ಹಾಸನ ತಂಡವನ್ನು ೭-೦ ಗೋಲುಗಳಿಂದ ಸೋಲಿಸಿ ಕೊಡಗು ತಂಡ ಟ್ರೋಫಿಗೆ ಮುತ್ತಿಕ್ಕಿತ್ತು.
ಅಂತರರಾಷ್ಟ್ರೀಯ ರಗ್ಬಿ ಆಟಗಾರ, ಶಿಕ್ಷಕರ ಕಲ್ಯಾಣ ಸಮಿತಿಯ ಅಧ್ಯಕ್ಷ, ಪ್ರಗತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಾದಂಡ ತಿಮ್ಮಯ್ಯ ಶಿಕ್ಷಣ ಇಲಾಖೆಯ ಮಡಿಕೇರಿಯ ಬಿಪಿಇಒ ಬಿ.ಆರ್.ಗಾಯತ್ರಿ, ಶ್ರೀನಿವಾಸ್, ಕವಿತ ತಮ್ಮಯ್ಯ, ಡ್ಯಾನಿ ಈರಪ್ಪ, ಸಿ.ಎನ್.ವಿಶ್ವನಾಥ್, ಅನಿತಾ, ಕೆ.ಆರ್.ಸುಬ್ಬಯ್ಯ, ಎಂ.ಕೆ.ರೋಹಿತ್, ಪಿ.ಎ. ಪ್ರವೀಣ್, ಎ. ಸೋಮಯ್ಯ, ಟಿ.ಡಿ. ರಮಾನಂದ, ಹೆಚ್.ಎಸ್. ಮಂಜುನಾಥ್, ಪಿ.ಎ. ಪ್ರಭುಕುಮಾರ್, ಡಾ.ಸೋಮಯ್ಯ, ಎಂ.ಎಸ್. ತಮ್ಮಯ್ಯ, ಬಿ.ಟಿ. ಪೂರ್ಣೇಶ್, ಟಿ.ಎಸ್.ಮಹೇಶ್, ಎನ್.ಎಸ್. ವಿಜಯಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.