ಶ್ರೀಮಂಗಲ, ಅ. ೨೫: ಸೈಬರ್ ಅಪರಾಧ ಮತ್ತು ಆನ್ಲೈನ್ನಲ್ಲಿ ತಪ್ಪು ಮಾಹಿತಿ ಕುರಿತು ರಾಜ್ಯ ಸರ್ಕಾರ ನೇಮಿಸಿದ ಅಧಿಕಾರ ಸಮಿತಿಯ ಅಧ್ಯಕ್ಷರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ವಿಶೇಷ ಉನ್ನತ ಮಟ್ಟದ ಸಭೆ ನಡೆಯಿತು.
ಈ ಸಭೆಯಲ್ಲಿ ಸಮಿತಿಯ ಸಹ ಅಧ್ಯಕ್ಷ ಹಾಗೂ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸಮಿತಿಯ ಸದಸ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಮಿತಿಯ ಸದಸ್ಯರು ಹಾಗೂ ಗೃಹ ಕಾರ್ಯದರ್ಶಿ ಉಮಾ ಶಂಕರ್, ಸಮಿತಿಯ ಸಂಚಾಲಕ ಹಾಗೂ ಡಿಜಿಪಿ ಪ್ರಣಾಬ್ ಮೊಹಂತಿ ಭಾಗವಹಿಸಿದ್ದರು.