ಸಿದ್ದಾಪುರ, ಅ. ೨೫: ನೆಲ್ಯಹುದಿಕೇರಿ ಗ್ರಾಮದಲ್ಲಿ ಹಿಂದೂ ಸ್ಮಶಾನಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಸ್ಮಶಾನ ಹೋರಾಟ ಸಮಿತಿಯಿಂದ ತಾ. ೨೮ ರಂದು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆ ಯಲ್ಲಿ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.
ನೆಲ್ಯಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಧನಲಕ್ಷಿö್ಮ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಮಶಾನ ಹೋರಾಟ ಸಮಿತಿಯ ಮುಖಂಡ ಪಿ.ಆರ್ ಭರತ್ ಮಾತನಾಡಿ, ಗ್ರಾಮದಲ್ಲಿ ೫ ಸಾವಿರಕ್ಕೂ ಹೆಚ್ಚು ಹಿಂದೂಗಳಿದ್ದು, ಬಹುತೇಕ ಜನರಿಗೆ ಸ್ವಂತ ಜಾಗವಿಲ್ಲ. ಇದೀಗ ಬೆಟ್ಟದಕಾಡುವಿನ ನದಿ ದಡದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಕುಸಿದ ನದಿ ದಡದಲ್ಲಿ ಜಾಗವಿಲ್ಲದೇ ಅಂತ್ಯಕ್ರಿಯೆಗೆ ಬೇರೆ ಗ್ರಾಮಗಳಿಗೆ ಹೋಗಬೇಕಾಗಿದೆ. ಬೆಟ್ಟದಕಾಡು ಗ್ರಾಮದಲ್ಲಿ ಸರ್ಕಾರದ ಜಾಗವಿದ್ದು, ದಾಖಲೆಯಲ್ಲಿ ಸ್ಮಶಾನ ಎಂದು ಉಲ್ಲೇಖವಾಗಿದೆ. ಅದೇ ಜಾಗ ನೀಡಬೇಕೆಂದು ಒತ್ತಾಯಿಸುತ್ತಿಲ್ಲ. ಪರ್ಯಾಯ ಜಾಗವನ್ನು ನೀಡಿದರೂ ಸಾಕು ಎಂದರು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರರು, ಸ್ಮಶಾನಕ್ಕೆ ಜಾಗ ನೀಡಲು ಪರಿಶೀಲಿಸಲಾಗುವುದು. ೩ ತಿಂಗಳ ಕಾಲಾವಕಾಶ ಬೇಕು ಎಂದರು. ಇದಕ್ಕೆ ಒಪ್ಪದ ಹೋರಾಟ ಸಮಿತಿ ಒಂದು ತಿಂಗಳಲ್ಲಿ ಜಾಗ ನೀಡುವಂತೆ ಒತ್ತಾಯಪಡಿಸಿದರು. ಬಳಿಕ ಸಭೆಯಿಂದ ನಿರ್ಗಮಿಸಿದರು.
ಸಭೆಯಲ್ಲಿ ಕಂದಾಯ ಪರಿವೀಕ್ಷಕರಾದ ಸಂತೋಷ್, ಗ್ರಾಮ ಆಡಳಿತ ಅಧಿಕಾರಿ ಸಚಿನ್, ಪಿ.ಡಿ.ಓ ನಂಜುAಡಸ್ವಾಮಿ, ಶ್ರೀ ಸತ್ಯನಾರಾಯಣ ದೇವಾಲಯ ಸಮಿತಿ ಅಧ್ಯಕ್ಷ ಟಿ.ಜಿ ಚಂದ್ರಶೇಖರ್ ಹಾಗೂ ಗ್ರಾ.ಪಂ ಸದಸ್ಯರು ಮತ್ತು ಹಾಗೂ ಇನ್ನಿತರರು ಹಾಜರಿದ್ದರು.