ಶನಿವಾರಸಂತೆ, ಅ. ೨೫: ವಿದ್ಯಾರ್ಥಿ ಗಳ ಭವಿಷ್ಯ ರೂಪಿಸಿ, ಗುರಿ ಸಾಧಿಸಲು ಮಾರ್ಗದರ್ಶನ ನೀಡಿ, ಜೀವನದಲ್ಲಿ ಬೆಳಕು ಮೂಡಿಸಿದ ಗುರುಗಳನ್ನು ಗೌರವಿಸುವುದು ಶಿಷ್ಯರ ಆದ್ಯ ಕರ್ತವ್ಯವಾಗಿದೆ ಎಂದು ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮ ಸಂಘದ ಅಧ್ಯಕ್ಷ ಎಂ.ಸಿ. ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಶಾಲೆಯ ೧೯೮೮-೮೯ನೇ ಶೈಕ್ಷಣಿಕ ಸಾಲಿನ (೭ನೇ ತರಗತಿ) ವಿದ್ಯಾರ್ಥಿಗಳಿಂದ ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮ ಸಂಘ ಮತ್ತು ಕ್ರೀಡಾ ತಂಡದ ಸಹಯೋಗದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಶಾಲೆಯನ್ನು ಅಭಿವೃದ್ಧಿಪಡಿಸುವುದರ ಜತೆಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವAತೆ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ನಿವೃತ್ತ ಶಿಕ್ಷಕರಾದ ಡಿ.ಬಿ. ಸೋಮಪ್ಪ, ಬಿ.ಎಂ. ಷಣ್ಮುಖಯ್ಯ, ಸ್ವಾತಿ, ದಿವಂಗತ ಶಿಕ್ಷಕರ ಪತ್ನಿಯರಾದ ಗಾಯತ್ರಿ ಶ್ರೀಪತಿ, ಅಕ್ಕಮ್ಮ ಶಾಂತಪ್ಪ, ತಂಗಮ್ಮ ಮುತ್ತಪ್ಪ, ವನಜಾಕ್ಷಿ ಗಣಪಯ್ಯ, ಸುದರ್ಶನ್ ಹೂವಯ್ಯ, ಕಿರಣ್ ಶಿವಪ್ಪ ಇವರುಗಳನ್ನು ಸನ್ಮಾನಿಸಿ ಗುರು ವಂದನೆ ಸಲ್ಲಿಸ ಲಾಯಿತು. ನಿವೃತ್ತ ಯೋಧರಾದ ಎಂ.ಕೆ. ರಾಮಕೃಷ್ಣ, ಜೆ.ಕೆ. ಮುರುಗನ್, ಮಹಿಳಾ ಉದ್ಯಮಿ ಹೇಮಲತಾ, ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ಮುಖ್ಯಶಿಕ್ಷಕಿ ಪಿ.ಕೆ. ರತ್ನಾ, ಶಿಕ್ಷಕ ವೃಂದದವರನ್ನು ಹಾಗೂ ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ರೇಖಾ ಲೋಕೇಶ್, ಜೆ.ಎಸ್. ಅಶೋಕ್, ಕಾರ್ಯದರ್ಶಿ ಸುನೀಲ್ ಗೌಡಳ್ಳಿ, ಜಂಟಿ ಕಾರ್ಯದರ್ಶಿಗಳಾದ ಹೆಚ್.ಎಸ್. ಮಲ್ಲೇಶ್, ಆಶಾ ರಾಜೇಶ್, ಖಜಾಂಚಿ ಎಂ.ಕೆ. ರಾಮಕೃಷ್ಣ, ಪ್ರಧಾನ ಸಂಚಾಲಕರಾದ ಜೆ.ಕೆ. ಮುರುಗನ್, ವೀರಭದ್ರಪ್ಪ, ಹೇಮಲತಾ, ಸದಸ್ಯರು ಹಾಜರಿದ್ದರು.
ರೇಖಾ ಲೋಕೇಶ್ ಮತ್ತು ತಂಡದವರು ಪ್ರಾರ್ಥಿಸಿ, ರಾಮಕೃಷ್ಣ ಸ್ವಾಗತಿಸಿ, ಸುನೀಲ್ ಮತ್ತು ಹೇಮಲತಾ ನಿರೂಪಿಸಿದರು. ಜೆ.ಕೆ. ಮುರುಗನ್ ಮತ್ತು ವೀರಭದ್ರಪ್ಪ ವಂದಿಸಿದರು.