ಮಡಿಕೇರಿ, ಅ. ೨೫: ಹಲವಷ್ಟು ಬೆಳವಣಿಗೆಗಳ ಬಳಿಕ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘಕ್ಕೆ (ಎಂಸಿಪಿಸಿಎಸ್) ಸುಮಾರು ೨೦ ವರ್ಷಗಳ ಬಳಿಕ ಸದಸ್ಯರ ಆಡಳಿತ ಮಂಡಳಿ ರಚನೆಗೊಳ್ಳುತ್ತಿದೆ. ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯ ಸದಸ್ಯರು, ಸಂಘ ಸಂಸ್ಥೆಗಳು ಸದಸ್ಯರುಗಳಾಗಿ ಈ ಹಿಂದೆ ಉತ್ತಮ ರೀತಿಯಲ್ಲಿದ್ದ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ಮೈಸೂರಿನಲ್ಲಿ ೧೦ ಎಕರೆ ಜಾಗವನ್ನು ಹೊಂದಿದ್ದು ಸುಸ್ಥಿತಿಯಲ್ಲಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಸಂಘದ ಬೆಳವಣಿಗೆ ಹಿನ್ನಡೆ ಕಂಡಿದ್ದು, ಇದರ ಸಮಾಪನಕ್ಕೆ ಈ ಹಿಂದೆ ಸರಕಾರದ ಮೂಲಕ ತೀರ್ಮಾನವಾಗಿತ್ತು. ಈ ಸಂದರ್ಭದಲ್ಲಿ ಸಂಘದÀ ೧೦ ಎಕರೆ ಜಾಗದ ಪೈಕಿ ೫ ಎಕರೆ ಜಾಗವೂ ಮಾರಾಟವಾಗಿತ್ತು. ೧೯೯೯ರಲ್ಲಿ ಈ ಸಂಘವನ್ನು ಸಮಾಪನಾಧಿಕಾರಿ ಮೂಲಕ ಸಮಾಪನಗೊಳಿಸಲಾಗಿತ್ತು. ಬಳಿಕ ಉಳಿಕೆ ೫ ಎಕರೆ ಜಾಗವನ್ನೂ ಮಾರಾಟ ಮಾಡಲು ಜಾಹೀರಾತು ನೀಡಲಾಗಿತ್ತು.
ಈ ಸಂದರ್ಭದಲ್ಲಿ ಸಂಘವನ್ನು ಉಳಿಸಿಕೊಂಡು ಮತ್ತೆ ಸದಸ್ಯರ ಸುಪರ್ದಿಗೆ ಪಡೆಯುವ ಪ್ರಯತ್ನವಾಗಿ ಅಮ್ಮತ್ತಿಯ ಪ್ರಮುಖರಾಗಿದ್ದ ಈಗ ದಿವಂಗತರಾಗಿರುವ ಮೂಕೋಂಡ ಬೋಸ್ ದೇವಯ್ಯ ಅವರ ಸಂಚಾಲಕತ್ವದಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಿ ಈ ಸಮಿತಿ ಮೂಲಕ ಹೋರಾಟಕ್ಕೆ ಇಳಿಯಲಾಗಿತ್ತು. ನ್ಯಾಯಾಲಯದಲ್ಲಿ ಮೊಕದ್ದಮೆಯೂ ದಾಖಲಾಗಿ ವ್ಯಾಜ್ಯ ಮುಂದುವರಿಸಲಾಗಿತ್ತು. ಈ ಹೋರಾಟಕ್ಕೆ ಆಗಿನ ಶಾಸಕ ಕೆ.ಜಿ. ಬೋಪಯ್ಯ ಅವರೂ ಸಹಕಾರ ನೀಡಿ ವಿಷಯ ವಿಧಾನ ಸಭೆಯಲ್ಲಿ ಪ್ರಸ್ತಾಪಗೊಂಡಿತ್ತು. ನಂತರದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರೂ ಸಹಕಾರ ನೀಡಿದ್ದರು. ಇದೆಲ್ಲದರ ಪ್ರತಿಫಲವಾಗಿ ಸಂಘದ ಪುನಶ್ಚೇತನಕ್ಕೆ ಸರಕಾರದ ಮೂಲಕ ಆದೇಶ ಜಾರಿಗೊಂಡಿತ್ತು. ಇದು ಇದರ ಹಿನ್ನಲೆಯಾಗಿದೆ.
ಇದೀಗ ಇದೇ ಅಕ್ಟೋಬರ್ ೩೦ಕ್ಕೆ ಸಂಘಕ್ಕೆ ಚುನಾವಣೆ ನಿಗದಿಪಡಿಸಲಾಗಿದ್ದು ಚುನಾವಣಾ ಪ್ರಕ್ರಿಯೆಯಂತೆ ನಾಮಪತ್ರ ಹಿಂಪಡೆಯಲು ತಾ. ೨೪ ಕೊನೆಯ ದಿನವಾಗಿತ್ತು.
ಸಂಧಾನ ಯಶಸ್ವಿ : ಸಂಘಕ್ಕೆ ಓರ್ವ ಅಧಿಕಾರಿ, ಒಂದು ಸರಕಾರದ ನಾಮನಿರ್ದೇಶನ ಸೇರಿ ಒಟ್ಟು ೧೯ ಸ್ಥಾನಗಳು ಬರುತ್ತವೆ. ಈ ಎರಡು ಸ್ಥಾನ ಹೊರತಾಗಿ ಇತರ ೧೭ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಇದರಲ್ಲಿ ಪರಿಶಿಷ್ಟ ಜಾತಿಯ ಒಂದು ಸ್ಥಾನ ಹಾಗೂ ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿದೆ.
ಹಿಂದುಳಿದ ವರ್ಗ ಎ ಸ್ಥಾನದ ಎರಡು ಸ್ಥಾನಕ್ಕೆ ಎಂ.ಎನ್. ಮಹಮದ್ ಆಲಿ ಹಾಗೂ ದಳವಾಯಿ ಹೆಚ್. ಉಮೇಶ್ ರಾಜೇ ಅರಸ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ನಡೆದಿದೆ.
ಬಿಡಿ ಸದಸ್ಯ ವಿಭಾಗದ ೫ ಸ್ಥಾನಕ್ಕೆ ಒಟ್ಟು ೮ ನಾಮಪತ್ರ ಸಲ್ಲಿಕೆಯಾಗಿತ್ತು. ಅಲ್ಲದೆ ಸಂಘ ಸಂಸ್ಥೆಗಳ ಡೆಲಿಗೇಟರ್ ಸ್ಥಾನದ ೬ ಕ್ಷೇತ್ರಕ್ಕೆ ೧೧ ನಾಮಪತ್ರ, ಮಹಿಳಾ ನಿರ್ದೇಶಕ ಸ್ಥಾನದ ೨ ಸ್ಥಾನಕ್ಕೆ ೪ ನಾಮಪತ್ರ ಸಲ್ಲಿಕೆಯಾಗಿ ಬಿರುಸಿನ ಚುನಾವಣೆಯ ಸನ್ನಿವೇಶ ಎದುರಾಗಿತ್ತು.
(ಮೊದಲ ಪುಟದಿಂದ) ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತರು, ಹೋರಾಟ ಸಮಿತಿಯವರು ಎಂಬ ಪರಿಸ್ಥಿತಿ ಎದುರಾಗಿ ಈ ಕಣ ತೀರಾ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು.
ಇದೀಗ ನಿನ್ನೆ ಇಡೀ ದಿನ ಈ ಬಗ್ಗೆ ಸಂಧಾನ ಪ್ರಕ್ರಿಯೆಗಳು ನಡೆದಿದ್ದು ಅಂತಿಮವಾಗಿ ಅವಿರೋಧ ಆಯ್ಕೆಗೆ ತೀರ್ಮಾನಿಸಿ ಹಲವರು ನಾಮಪತ್ರ ಹಿಂಪಡೆದಿದ್ದಾರೆ. ಮಹಿಳಾ ಸ್ಥಾನಕ್ಕೆ ಮಾತ್ರ ೪ ನಾಮಪತ್ರ ಇದ್ದು, ನಾಮಪತ್ರ ವಾಪಸಾತಿ ದಿನ ಯಾರೂ ಬಾರದ ಕಾರಣ ಇದಕ್ಕೆ ಚುನಾವಣೆ ಅನಿವಾರ್ಯವಾಗಿದೆ.
ಅವಿರೋಧ ಆಯ್ಕೆ ಯರ್ಯಾರು ?
ಬಿಡಿ ಸದಸ್ಯ ವಿಭಾಗದಲ್ಲಿ ೫ ಸ್ಥಾನಕ್ಕೆ ಬಿ.ಎನ್. ಪ್ರಸಾದ್ ಶಿವಪ್ಪ, ಐ.ವಿ. ಶಂಕರಲಿAಗೇಗೌಡ, ಜಿ.ಎಸ್. ಪ್ರಭುದೇವ್, ಹೆಚ್.ಎಂ. ರಾಜಶೇಖರ್ ಹಾಗೂ ಅಳಮೇಂಗಡ ವಿವೇಕ್ ಆಯ್ಕೆಯಾಗಿದ್ದಾರೆ. ಕೆ.ಪಿ. ನಾಗರಾಜ್, ಕಾಂಡAಡ ಚರ್ಮಣ ಹಾಗೂ ಎಸ್.ಪಿ. ಪ್ರಸನ್ನ ನಾಮಪತ್ರ ಹಿಂಪಡೆದಿದ್ದಾರೆ.
ಸAಘ ಸಂಸ್ಥೆಗಳ ಡೆಲಿಗೇಟರ್ ಸ್ಥಾನದಿಂದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಶಾಂತಳ್ಳಿಯ ದಿನೇಶ್ ಕುಮಾರ್, ಬಿರುನಾಣಿಯ ಚಲನ್ ಕುಮಾರ್, ಕೋಲತಂಡ ಸುಬ್ರಮಣಿ, ಚೇಂದ್ರಿಮಾಡ ಗಣೇಶ್ ನಂಜಪ್ಪ ಹಾಗೂ ಚೇರಂಡ ನಂದಾ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ತಿಮ್ಮಯ್ಯ, ಬಿ.ಬಿ. ಸತೀಶ್, ಡಿ.ಬಿ. ಧರ್ಮಪ್ಪ, ಸಂದೀಪ್, ನಂಬಿಯಪAಡ ಕಂಬ ಸಂಧಾನದ ಬಳಿಕ ನಾಮಪತ್ರ ಹಿಂಪಡೆದಿದ್ದಾರೆ.
ಮಹಿಳಾ ಮೀಸಲಿನ ೨ ಸ್ಥಾನಕ್ಕೆ ಬಿ.ಎಸ್. ಲೀಲಾಕುಮಾರಿ, ಸಿ.ಎಂ. ಕಾವೇರಿಯಮ್ಮ, ಎಂ.ಸಿ. ಸೀತವ್ವ, ಹಾಗೂ ಸಿ.ಕೆ. ಗೀತಾ ಕಣದಲ್ಲಿದ್ದು, ತಾ. ೩೦ರಂದು ಚುನಾವಣೆ ನಡೆಯಬೇಕಿದೆ. ಮನು ಮುತ್ತಪ್ಪ, ಪ್ರಸಾದ್ ಶಿವಪ್ಪ, ಶಂಕರಲಿAಗೇಗೌಡ, ಚಲನ್ಕುಮಾರ್, ಪ್ರಭುದೇವ್, ಅರುಣ್ ಭೀಮಯ್ಯ ಅವರುಗಳು ಸಂಧಾನ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಶ್ರಮಿಸಿದ್ದಾಗಿ ತಿಳಿದುಬಂದಿದೆ.