ವೀರಾಜಪೇಟೆ, ಅ. ೨೫: ವೀರಾಜಪೇಟೆಯ ವಿ ಲೆಜೆಂಡ್ಸ್ ಸಂಸ್ಥೆಯ ವತಿಯಿಂದ ಐವತ್ತು ವರ್ಷ ಮೇಲ್ಪಟ್ಟ ಹಿರಿಯ ಫುಟ್‌ಬಾಲ್ ಆಟಗಾರರಿಗೆ ನವೆಂಬರ್ ೩೦ ಮತ್ತು ಡಿಸೆಂಬರ್ ೧ ರಂದು ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಹೊನಲು ಬೆಳಕಿನ ೫+೨ ಲೆಜೆಂಡ್ಸ್ ಫುಟ್‌ಬಾಲ್ ಪಂದ್ಯಾಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಲ್.ಜಿ ಭಾಸ್ಕರ್ ಹೇಳಿದರು.
ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾ ಜಿಲ್ಲೆ ಎಂದು ಹೆಸರುವಾಸಿಯಾದ ಕೊಡಗಿನಲ್ಲಿ ಎಲ್ಲಾ ಸ್ತರದ ಕ್ರೀಡಾಪಟುಗಳಿದ್ದಾರೆ. ಹÀಲವಾರು ಹಿರಿಯ ಕ್ರೀಡಾಪಟುಗಳಲ್ಲಿ ಆಡುವ ಉತ್ಸಾಹ ಇದ್ದರೂ ಅವಕಾಶದ ಕೊರತೆÀ ಮತ್ತು ವಯೋಮಾನದ ದೃಷ್ಟಿಯಿಂದ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐವತ್ತು ವರ್ಷ ಮೇಲ್ಪಟ್ಟ ಆಟಗಾರರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ವೀರಾಜಪೇಟೆ ಪಟ್ಟಣದ ಆರು ಕಿಲೋಮೀಟರ್ ಪರಿಮಿತಿಯಲ್ಲಿ ಇರುವ ಆಟಗಾರರಿಗೆ ಫುಟ್‌ಬಾಲ್ ಪಂದ್ಯಾಟವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ವಿ ಲೆಜೆಂಡ್ಸ್ ಸಂಸ್ಥೆಯಿAದ ಇದೊಂದು ಪ್ರಥಮ ಪ್ರಯತ್ನವಾಗಿದೆ. ಪ್ರಥಮ ಬಾರಿ ಆದ ಕಾರಣ ಕೇವಲ ಎಂಟು ತಂಡಗಳಿಗೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಆರು ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿವೆ. ಹೆಸರು ನೋಂದಾ ಯಿಸಲು ನವೆಂಬರ್ ೧೦ ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ೯೮೮೦೫೦೨೬೩೧, ೯೯೭೨೯೫೯೧೫೬ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯಲಿದ್ದು ಅಂಕಗಳ ಆಧಾರದ ಮೇಲೆ ಫೈನಲ್ಸ್ ನಡೆಸಲಾಗುವುದು. ವಿಜೇತರಿಗೆ ನಗದು ಹಾಗೂ ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು. ಖಜಾಂಚಿ ರ‍್ವಿನ್‌ಲೋಬೋ ಮಾತನಾಡಿ, ಈ ಪಂದ್ಯಾಟದಲ್ಲಿ ಭಾಗವಹಿಸಲು ಯಾವುದೇ ಜಾತಿ ಮತ ಧರ್ಮವಿಲ್ಲ. ಕೇವಲ ಪ್ರೀತಿ, ವಿಶ್ವಾಸ ಮತ್ತು ಸ್ನೇಹಚಾರದ ಕ್ರೀಡಾ ಸಮ್ಮಿಲನವಾಗಿದೆ. ಈ ಪಂದ್ಯಾಟದಲ್ಲಿ ನಮ್ಮನ್ನಗಲಿದ ಹಿರಿಯ ಫುಟ್‌ಬಾಲ್ ಕ್ರೀಡಾಪಟುಗಳಿಗೆ ಗೌರವ ಸೂಚಿಸುವ ಕಾರ್ಯಕ್ರಮವು ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಬಿ. ಪ್ರಕಾಶ್, ಸಹಕಾರ್ಯದರ್ಶಿ ಜಿ.ಜಿ. ಮೋಹನ್, ಸಹ ಖಜಾಂಚಿ ಎಂ.ಪಿ. ಅಲ್ತಾಫ್, ನಿರ್ದೇಶಕರುಗಳಾದ ವಿ. ಜನಾರ್ಧನ್, ಕೆ.ಎನ್. ಉಪೇಂದ್ರ, ಡಿ.ಜೆ. ಕೇಶವ್‌ಕುಮಾರ್, ಜಿಮ್ಮಿ ಉಪಸ್ಥಿತರಿದ್ದರು.