ಶ್ರೀಮಂಗಲ, ಅ. ೨೫: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ವೈವಿಧ್ಯಮಯ ಕೊಡವ ನೃತ್ಯ ಪ್ರಕಾರಗಳು ಚಂಗ್ರಾAದಿ ಪತ್ತಲೋದಿಯ ಏಳನೆ ದಿನಕ್ಕೆ ಮೆರುಗು ನೀಡಿತು. ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಡವ ಜಾನಪದ ಸೇರಿದಂತೆ ವಿವಿಧ ಕೊಡವ ಹಾಡುಗಳಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು.
ಈ ಸಂದರ್ಭ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಚ್ಚಮಾಡ ಡಾಲಿ ಚಂಗಪ್ಪ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜಕ್ಕೆ ವಿಶೇಷ ಇತಿಹಾಸವಿದೆ. ಮೊದಲು ನ್ಯಾಯಪೀಠ ನಡೆಸುತ್ತಿದ್ದ ಕೊಡವ ಸಮಾಜ ಇಂದು ಬೇರೆ ಯಾವುದೇ ಕೊಡವ ಸಮಾಜಗಳು ಮಾಡದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮವನ್ನು ಹತ್ತು ದಿನಗಳವರೆಗೆ ಯಶಸ್ವಿಯಾಗಿ ನಡೆಸುತ್ತಿದೆ. ಇದರಲ್ಲಿ ನಾಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಬಾಲ ಗಂಗಾಧರನಾಥ ತಿಲಕ್'ರವರು ಹಿಂದುಗಳನ್ನು ಒಂದುಗೂಡಿಸಲು ಗಣೇಶ ಉತ್ಸವ ಆರಂಭಿಸಿದರು. ಅದೇ ರೀತಿ ಈ ಪತ್ತಲೋದಿ ಕಾರ್ಯಕ್ರಮ ಕೊಡವರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ. ವಯಸ್ಸಾದ ಪೋಷಕರನ್ನು ಮಕ್ಕಳು ಚೆನ್ನಾಗಿ ಸಾಕಬೇಕು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡವ ಸಮಾಜ ಆರ್ಥಿಕ ಸಹಕಾರ ನೀಡಬೇಕೆಂದರು.
ಮತ್ತೋರ್ವ ಮುಖ್ಯ ಅತಿಥಿ ಅಪ್ಪಚಂಗಡ ಮೋಟಯ್ಯ ಮಾತನಾಡಿ ಕೊಡವರ ಸಂಸ್ಕೃತಿ ಕ್ಷೀಣಿಸದಿರಲು ಕೊಡವರ ಜನಸಂಖ್ಯೆ ಹೆಚ್ಚಿಸಬೇಕು. ಕೊಡವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದು, ತಮ್ಮ ಪ್ರಾಮಾಣಿಕತೆಯಿಂದಲೇ ಹಲವು ಕೊಡವರು ಉನ್ನತಾಧಿಕಾರ ಪಡೆದುಕೊಂಡ ಬಹಳಷ್ಟು ಉದಾಹರಣೆಗಳಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೈಬಿಲಿರ ಹರೀಶ್ ಅಪ್ಪಯ್ಯ ನಮ್ಮ ಕೊಡವ ಸಮಾಜದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ದತ್ತಿನಿಧಿ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ವೇದಿಕೆಯಲ್ಲಿ ಕೊಡವ ಸಮಾಜದ ಖಜಾಂಚಿ ಚಂಗುಲAಡ ಸತೀಶ್, ಸದಸ್ಯರಾದ ಅಪ್ಪಚಂಗಡ ಲಲಿತ ಮೋಟಯ್ಯ, ಮಚ್ಚಮಾಡ ರೋಝಿ ಸುಮಂತ್, ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಚಟ್ಟಂಡ ಲೇಪಾಕ್ಷಿ ನಟೇಶ್ ಉಪಸ್ಥಿತರಿದ್ದರು. ಕೊಡವ ಸಮಾಜದ ಸದಸ್ಯೆ ಮುಕ್ಕಾಟಿರ ಉಷ ಪ್ರಾರ್ಥಿಸಿ, ನಿರ್ದೇಶಕಿಯರಾದ ತೀತಿರ ಅನಿತ ಸುಬ್ಬಯ್ಯ ಸ್ವಾಗತಿಸಿ, ಚಂಗುಲAಡ ಅಶ್ವಿನಿ ಸತೀಶ್ ನಿರೂಪಿಸಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು. ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ನಿರ್ದೇಶಕರಾದ ಆಂಡಮಾಡ ಸತೀಶ್ ವಿಶ್ವನಾಥ್, ಬಾದುಮಂಡ ವಿಷ್ಣು ಕಾರ್ಯಪ್ಪ ಕಾರ್ಯಕ್ರಮ ನಿರ್ವಹಿಸಿದರು.