ಸೋಮವಾರಪೇಟೆ, ಅ. ೨೫: ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆ ನಿನ್ನೆ ತಡರಾತ್ರಿವರೆಗೂ ನಡೆದು ಪಂಚಾಯಿತಿಗೆ ತಿಂಗಳಿಗೆ ರೂ. ೪,೮೭,೯೬೧ ಲಕ್ಷ ಆದಾಯ ಲಭಿಸಿದೆ.
ಹಾಲಿ ವರ್ತಕರು ಮಳಿಗೆಗಳನ್ನು ಶೇಕಡಾವಾರು ಬಾಡಿಗೆ ಹೆಚ್ಚಿಸಿ ನೀಡುವಂತೆ ಒತ್ತಾಯಿಸಿ, ಹೈಕೋರ್ಟ್ನಲ್ಲಿ ಟೆಂಡರ್ ವಿರುದ್ಧ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ನಂತರ ಪಂಚಾಯಿತಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಟೆಂಡರ್ ಪ್ರಕ್ರಿಯೆಯನ್ನು ನಡೆಸಿತ್ತು.
ಮಳಿಗೆಯೊಂದಕ್ಕೆ ರೂ. ೩,೧೪೧ನ್ನು ನಿಗದಿಗೊಳಿಸಿ ಟೆಂಡರ್ ನಡೆಸಲಾಯಿತು. ಅದರಲ್ಲಿ ಒಂದು ಮಳಿಗೆ ರೂ. ೫೫ ಸಾವಿರಕ್ಕೆ ಬಿಡ್ಡಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಒಂದೊAದು ಮಳಿಗೆಗಳಿಗೆ ಯಾರೂ ಟೆಂಡರ್ನಲ್ಲಿ ಭಾಗವಹಿಸದ ಹಿನ್ನೆಲೆ ಟೆಂಡರ್ ಮುಂದೂಡಲಾಯಿತು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟೆಂಡರ್ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ ಹಾಗೂ ಸದಸ್ಯರು, ಮುಖ್ಯಾಧಿಕಾರಿ ನಾಚಪ್ಪ ಮತ್ತಿತರರು ಇದ್ದರು.