ಮಡಿಕೇರಿ, ಅ. ೨೫: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ತೀರಾ ಕಡಿಮೆಯಾಗಿದ್ದ ಮಳೆ ೨೦೨೪ರ ಜನವರಿಯಿಂದ ಮೇ ತನಕವೂ ಸಕಾಲದಲ್ಲಿ ಸುರಿಯದೆ ಜಿಲ್ಲೆಯಲ್ಲಿ ಬರಗಾಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನವರಿಯಿಂದ ಮೇ ತನಕ ಎದುರಾಗಿದ್ದ ಭಾರೀ ತಾಪಮಾನ ಕಾಫಿ ಬೆಳೆಗಾರರನ್ನು ಕಂಗೆಡಿಸುವAತೆ ಮಾಡಿತ್ತು. ಅಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ, ನದಿ ಸೇರಿದಂತೆ, ಹಲವು ಜಲಮೂಲಗಳು ಬತ್ತಿ ಹೋಗಿ ತೋಟಗಳಿಗೆ ನೀರು ಹಾಯಿಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿ ಆದೇಶ ಹೊರಡಿಸಿದ್ದ ಪರಿಸ್ಥಿತಿ ಕಂಡು ಬಂದಿತ್ತು.

ಆದರೆ ಜೂನ್ ತಿಂಗಳಿನಿAದ ಮುಂಗಾರು ಮಳೆ ಪ್ರಾರಂಭಗೊAಡಿದ್ದು, ಈ ಬಾರಿ ಮುಂಗಾರುಮಳೆ ಜನತೆಯನ್ನು ತಲ್ಲಣಗೊಳಿಸಿದಂತಿದೆ. ಮೃಗಶಿರ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖಾ, ಹುಬ್ಬ, ಉತ್ತರ, ಹಸ್ತ ಸೇರಿದಂತೆ ನಿನ್ನೆಯಿಂದ ಚಿತ್ರಾ ಮಳೆನಕ್ಷತ್ರ ಆರಂಭಗೊAಡಿದ್ದು, ಈ ಎಲ್ಲಾ ಮಳೆ ನಕ್ಷತ್ರಗಳಲ್ಲೂ ಜಿಲ್ಲೆ ಬಹುತೇಕ ಮಳೆಯ ವಾತಾವರಣ ವನ್ನೇ ಕಂಡಿದೆ. ಈ ಪರಿಸ್ಥಿತಿ ಮತ್ತೂ ಮುಂದುವರಿಯುತ್ತಿದೆ. ಈಗಾಗಲೇ ಜಿಲ್ಲೆ ಸತತ ಐದು ತಿಂಗಳ ಕಾಲ ಮಳೆಗಾಲವನ್ನು ಕಂಡಿದ್ದು, ಜನತೆಯ ಬವಣೆ ಇನ್ನೂ ನಿಂತಿಲ್ಲ.

ಜಿಲ್ಲೆಗೆ ಸರಾಸರಿ ೫೧.೮೪ ಇಂಚು ಅಧಿಕ

ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಗೆ ಪ್ರಸಕ್ತ ವರ್ಷ ೫೧.೮೪ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ತನಕ ೬೭.೩೪ ಇಂಚು ಮಳೆಯಾಗಿದ್ದರೆ ಈ ಬಾರಿ ೧೧೯.೧೮ ಇಂಚು ಸುರಿದಿದೆ.

ಮಡಿಕೇರಿ ತಾಲೂಕಿಗೆ ೬೦ ಇಂಚು ಜಾಸ್ತಿ

ಜಿಲ್ಲೆಯ ಐದು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿಗೆ ಭಾರೀ ಮಳೆಯಾಗಿದೆ. ತಾಲೂಕಿನಲ್ಲಿ ಜನವರಿಯಿಂದ ಈ ತನಕ ೧೭೩.೪೩ ಇಂಚು ಮಳೆಯಾಗಿದ್ದು, ಕಳೆದ ವರ್ಷ ೧೧೫.೨೧ ಇಂಚು ಮಳೆಯಾಗಿತ್ತು. ಈ ಬಾರಿ ೬೦.೨೨ ಇಂಚುಗಳಷ್ಟು ಅಧಿಕ ಮಳೆ ದಾಖಲಾಗಿದೆ.

ವೀರಾಜಪೇಟೆ ತಾಲೂಕಿಗೆ ಈ ಬಾರಿ ೧೦೫.೮೯ ಇಂಚು, ಪೊನ್ನಂಪೇಟೆ ೧೧೦.೫೨, ಸೋಮವಾರಪೇಟೆ ೧೩೫.೧೬ ಹಾಗೂ ಕುಶಾಲನಗರ ತಾಲೂಕಿಗೆ ಸರಾಸರಿ ೭೦.೯೨ ಇಂಚು ಮಳೆಯಾಗಿದೆ. ಕಳೆದ ವರ್ಷ ವೀರಾಜಪೇಟೆ ತಾಲೂಕಿನಲ್ಲಿ ೫೫.೯೨, ಪೊನ್ನಂಪೇಟೆ ೬೦.೮೪, ಸೋಮವಾರಪೇಟೆ ೬೮.೪೨ ಹಾಗೂ ಕುಶಾಲನಗರ ತಾಲೂಕಿನಲ್ಲಿ ಈ ಅವಧಿಯಲ್ಲಿ ೩೮.೨೮ ಇಂಚು ಮಳೆಯಾಗಿತ್ತು.

ಪ್ರಸಕ್ತ ವರ್ಷ ವೀರಾಜಪೇಟೆ ತಾಲೂಕಿಗೆ ೪೯.೯೭, ಪೊನ್ನಂಪೇಟೆ ೪೯.೬೮, ಸೋಮವಾರಪೇಟೆ ೬೬.೭೪ ಹಾಗೂ ಕುಶಾಲನಗರ ತಾಲೂಕಿಗೆ ೩೨.೬೪ ಇಂಚು ಅಧಿಕ ಮಳೆ ದಾಖಲಾಗಿದೆ.