ಸುಂಟಿಕೊಪ್ಪ, ಅ. ೨೬: ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಜಿಲ್ಲೆಯ ಯುವಕ ಮೃತಪಟ್ಟಿದ್ದಾನೆ.
ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ವ್ಯಾಪ್ತಿಯ ೭ನೇ ಮೈಲ್ ನಿವಾಸಿ ಕಿಶೋರ್ (೩೪) ಮೃತ ದುರ್ದೈವಿ. ಕಾರ್ಯನಿಮಿತ್ತ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿAದ ಹೊಸೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ಕಿಶೋರ್ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈತ ಬೆಂಗಳೂರಿನಲ್ಲಿ ಎಲೆಕ್ಟಿçÃಷಿಯನ್ ವೃತ್ತಿಯಲ್ಲಿದ್ದು, ಬೆಳಿಗ್ಗೆ ೧೧ ಗಂಟೆಗೆ ಕಾರ್ಯನಿಮಿತ್ತ ಸ್ನೇಹಿತ ಗಣೇಶ ಎಂಬಾತನನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೊಸೂರು ಕಡೆಗೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಹಿಂಬದಿ ಸವಾರ ಗಣೇಶ ಗಂಭೀರ ಗಾಯಗೊಂಡಿದ್ದು, ಈತನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಮೃತನ ತಂದೆ ಕಳೆದ ೩ ತಿಂಗಳ ಹಿಂದೆಯಷ್ಟೇ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಇದೀಗ ಮಗನ ಸಾವಿನಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ತಾ. ೨೭ರಂದು (ಇಂದು) ಕೆದಕಲ್ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.