ಚೆಯ್ಯಂಡಾಣೆ, ಅ. ೨೬: ಕಡಂಗ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ಲೈಫ್ ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜೀವನ್ ಗೌಡ ಉದ್ಘಾಟಿಸಿದರು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ವೈದ್ಯಕೀಯ ತಜ್ಞರ ಪರೀಕ್ಷೆ ನಡೆಯಿತು.

ಈ ಸಂದರ್ಭ ಲೈಫ್ ಕೇರ್‌ನ ಕೌಶಿಕ್ ಮಾತನಾಡಿದರು. ಈ ಸಂದರ್ಭ ಲೈಫ್ ಕೇರ್ ಪ್ರಯೋಗಾಲಯದ ಅಧಿಕಾರಿ ಎಂ.ಆರ್. ಕೌಶಿಕ್, ಬಿ.ಎಸ್. ಸಿ. ಭವ್ಯ, ಜಿ.ಎನ್.ಎಂ. ಸೌಮ್ಯ, ಎನ್.ಎಲ್, ಸಾರ್ವಜನಿಕರು, ಮತ್ತಿತರರು ಹಾಜರಿದ್ದರು.