ವೀರಾಜಪೇಟೆ, ಅ. ೨೬: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದಲ್ಲಿ ಒಂದು ಎಕರೆ ಖಾಸಗಿ ಜಾಗದಲ್ಲಿ ಕಲ್ಲು ಕ್ರಷರ್ ಘಟಕ ಸ್ಥಾಪನೆ ಕುರಿತ ವಿಚಾರಕ್ಕೆ ಸಂಬAಧಿಸಿದAತೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಮೇರಿ ಗ್ರಾಮದ ಸರ್ವೆ ಸಂಖ್ಯೆ ೩೪೩ ರಲ್ಲಿ ಕಲ್ಲು ಕ್ರಷರ್ ಘಟಕವನ್ನು ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ನೀಡಿದ ದೂರಿನ ಅನ್ವಯ ತಹಶೀಲ್ದಾರ್ ಹಾಗೂ ಕೊಡಗು ಭೂ ವಿಜ್ಞಾನಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಘಟಕದ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಯಿತು.
ಕೋದಂಡ ಸುರ ಅಯ್ಯಪ್ಪ ವಿರೋಧ ವ್ಯಕ್ತಪಡಿಸಿ ಭವಿಷ್ಯದಲ್ಲಿ ನಮ್ಮ ಗ್ರಾಮಕ್ಕೆ ತೊಂದರೆ ಉಂಟಾಗುತ್ತದೆ. ಸ್ಥಳ ಸರ್ವೆ ವೇಳೆ ಇಲ್ಲಿ ಜನವಸತಿ ಪ್ರದೇಶ ಇಲ್ಲ ಎನ್ನಲಾಗಿದೆ. ಆದರೂ ಮುಂದೆ ಹಾನಿ ಆಗುವ ಸಂಭವ ಇರಬಹುದು. ಘಟಕದ ಬಗ್ಗೆ ಕೆಲವು ಹಿರಿಯ ಮುಖಂಡರಿAದ ಒತ್ತಡ ಬಂದಿದ್ದು ನಮ್ಮ ನಿಲುವು ಒಂದೇ ಆಗಿದೆ ಎಂದು ಹೇಳಿದಾಗ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಕೋದಂಡ ಮಂಜುಳಾ ಅಯ್ಯಪ್ಪ ಗಣಿಗಾರಿಕೆ ವಿರೋಧÀ ವ್ಯಕ್ತಪಡಿಸಿದರು.
ಕ್ರಷರ್ ಘಟಕ ಸ್ಥಾಪನೆಗೆ ಮುಂದಾಗಿರುವ ಎ.ಆರ್. ವೇಣು ಉತ್ತರಿಸಿ ಈ ಕ್ರಷರ್ ಘಟಕ ಸರ್ಕಾರದ ನಿಯಮದಂತೆ ಸ್ಥಾಪಿಸಲಾಗುತ್ತಿದೆ. ಈ ಹಿನ್ನೆಲೆ ಇಲಾಖೆ ನಿಯಮ ಅನುಸಾರ ಇಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಮ್ಮಲ್ಲಿ ವೈಜ್ಞಾನಿಕ ಹಾಗೂ ಸುಧಾರಿತ ಯಂತ್ರಗಳಿದ್ದು ಶಬ್ದಮಾಲಿನ್ಯ ಇರುವುದಿಲ್ಲ. ಡೈನಾಮೈಟ್ ಬಳಸದೆ ಎಲೆಕ್ಟಿçಕಲ್ ಯಂತ್ರದ ಮೂಲಕ ಕಲ್ಲು ಒಡೆಯಲಾಗುತ್ತದೆ. ಕ್ರಷರ್ಗೆ ಸಂಬAಧಿಸಿದ ಸ್ಥಳ ಹಾಗೂ ಎಲ್ಲಾ ದಾಖಲೆಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ಗ್ರಾಮಸ್ಥರಾದ ಬಲ್ಲಚಂಡ ಗೌತಮ್ ಮಾತನಾಡಿ, ಘಟಕ ನಿಯಮ ಪಾಲಿಸದೆ ಹೋದರೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅವಕಾಶ ಇದೆ. ಅದರಿಂದ ಅನಗತ್ಯ ಗೊಂದಲ ಬೇಡ ಎಂದು ಹೇಳಿದರು. ಘಟನಾ ಸ್ಥಳದಲ್ಲಿದ್ದ ತಹಶೀಲ್ದಾರ್ ರಾಮಚಂದ್ರ ಅವರು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಹುಲ್ ಅವರಿಂದ ಡ್ರೋನ್ ಸರ್ವೆ ನಡೆಸಿ ಮಾಹಿತಿ ಪಡೆದು ಕೊಂಡರು. ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಜರುಗಿಸುವ ಅವಕಾಶ ಇದೆ ಎಂದರು.
ಈ ಸಂದರ್ಭ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಳಂಡ ಸುಗುಣ, ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭರತ್ ಹಾಗೂ ಸದಸ್ಯ ಸೋಮೆಯಂಡ ರೇಶ ಮತ್ತು ಗ್ರಾಮಭಿವೃದ್ಧಿ ಅಧಿಕಾರಿ ಸುರೇಶ್, ಪರಿಸರ ಇಲಾಖೆಯ ಅಧಿಕಾರಿ ಎಂ.ಜಿ. ರಘುರಾಮನ್, ಭೂವಿಜ್ಞಾನ ಇಲಾಖೆಯ ಅಭಿಯಂತರ ಚೈತ್ರ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್, ವೀರಾಜಪೇಟೆ ಕಂದಾಯ ಪರಿವೀಕ್ಷಕ ಹರೀಶ್, ಅರಮೇರಿ ಹಾಗೂ ಕಡಂಗಮೂರುರು ಗ್ರಾಮಸ್ಥರು ಹಾಜರಿದ್ದರು.