ಪಾಲಿಬೆಟ್ಟ, ಅ. ೨೬: ಚೆನ್ನಂಗಿಯ ರೇಷ್ಮೆ ಹಾಡಿಯಲ್ಲಿ ಆಶ್ರಯಹಸ್ತ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಶ್ರಯದಲ್ಲಿ ೪ ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸಲಾಯಿತು. ಗರ್ಭಿಣಿ ಸ್ತಿçÃಯರಿಗೆ ಸೀರೆ, ಬಳೆ, ಅರಶಿನ-ಕುಂಕುಮ, ಹಣ್ಣು-ಹಂಪಲು, ತೆಂಗಿನಕಾಯಿಯನ್ನು ನೀಡಲಾಯಿತು.
ತಿತಿಮತಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ವರ್ಷಾ ಮಾತನಾಡಿ, ಪೌಷ್ಠಿಕ ಆಹಾರವನ್ನು ಸೇವಿಸಬೇಕು, ಸಣ್ಣ-ಪುಟ್ಟ ವ್ಯಾಯಾಮ ಮಾಡಬೇಕು, ದಿನನಿತ್ಯ ಸ್ವಚ್ಛತೆಯಿಂದ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಗೀತಾ, ಅಂಗನವಾಡಿ ಕಾರ್ಯಕರ್ತೆ ಮೀನಾ ಕುಮಾರಿ, ಆಶಾ ಕಾರ್ಯಕರ್ತೆ ಪಂಕಜ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಯೋಜನಾಧಿಕಾರಿ ಗುಣಶೇಖರ್ ಹಾಗೂ ಮೇಲ್ವಿಚಾರಕರಾದ ಮೋಹಿನಿ ರೈ ಮತ್ತಿತರರು ಇದ್ದರು.