ಮಂಗಳೂರು, ಅ. ೨೬: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಮಂಗಳೂರಿನಿAದ ಮಹಿಳೆಯೊಬ್ಬರಿಗೆ ಕುಶಾಲನಗರದಲ್ಲಿ ಸೈಟ್ ಕೊಡಿಸುವ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವರದಿ ಆಗಿದ್ದು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಟ್ ತೋರಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ
(ಮೊದಲ ಪುಟದಿಂದ) ಮಂಗಳೂರು ನಗರದ ಬಲ್ಮಟದಲ್ಲಿ ನೆಲೆಸಿರುವ ಮುಸ್ಲಿಂ ಮಹಿಳೆಯೊಬ್ಬರು ಕೊಡಗಿನಲ್ಲಿ ಮನೆ ನಿವೇಶನ ಹುಡುಕುತ್ತಿದ್ದರು. ಆಗ ತಮಗೆ ಪರಿಚಯವಿದ್ದ ಬಿಲ್ಡರ್ ರಶೀದ್ (೬೫) ಎಂಬುವವರಿಗೆ ಸೈಟ್ಗಾಗಿ ಹೇಳಿದ್ದರು. ಇದನ್ನೇ ನೆಪ ಮಾಡಿಕೊಂಡ ರಶೀದ್ ಕುಶಾಲನಗರದಲ್ಲಿ ಕಡಿಮೆ ದರಕ್ಕೆ ಸೈಟ್ ಕೊಡಿಸುವುದಾಗಿ ಭರವಸೆ ನೀಡಿ ತನ್ನದೇ ಕಾರಿನಲ್ಲಿ ಕುಶಾಲನಗರಕ್ಕೆ ತಾ ೨೧ ರಂದು ಕರೆತಂದಿದ್ದಾನೆ. ರಾತ್ರಿ ೮ ಘಂಟೆಗೆ ಕುಶಾಲನಗರ ತಲುಪಿ ಹೊಟೇಲ್ನಲ್ಲಿ ಉಳಿಯುವಾಗ ಒಂದೇ ಕೊಠಡಿಯಲ್ಲಿ ತಂಗಲು ಯೋಜನೆ ಹಾಕಿಕೊಂಡಿದ್ದ. ಆಗ ಮಹಿಳೆ ಬೆದರಿ ಹೊಟೇಲ್ನಿಂದ ಹೊರಹೋಗಿ ವೀರಾಜಪೇಟೆಯ ತನ್ನ ತಂಗಿ ಮನೆಗೆ ತೆರಳಿದ್ದಾರೆ. ಅಲ್ಲಿ ಉಳಿದು ಪುನಃ ೨೨ ರಂದು ಬೆಳಿಗ್ಗೆ ರಶೀದ್ ಬಳಿ ಬಂದಿದ್ದಾಳೆ.
ಆಗ ಆರೋಪಿ ಅಲ್ಲಿ ಇಲ್ಲಿ ಸುತ್ತಾಡಿಸಿ ವಾಪಸ್ ಮಂಗಳೂರಿಗೆ ತೆರಳುವಾಗ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ಒಂದು ಲಕ್ಷ ರೂಪಾಯಿ ಇರುವ ಹಣದ ಕಟ್ಟನ್ನು ತೋರಿಸಿ ಲೈಂಗಿಕ ಸಂಪರ್ಕಕ್ಕೆ ಆಮಿಷ ಒಡ್ಡಿದ್ದಾನೆ. ತನಗೆ ಕುಶಾಲನಗರದಲ್ಲಿ ಸೈಟ್ಗಳಿದ್ದು ತನ್ನೊಂದಿಗೆ ಸಹಕರಿಸಿದರೆ ಅದನ್ನು ನೀಡುವ ಆಮಿಷವನ್ನೂ ಒಡ್ಡಿದ್ದಾನೆ. ಮಹಿಳೆ ಪ್ರತಿಭಟಿಸಿದಾಗ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ನಂತರ ಕಾರಿನಲ್ಲಿಯೇ ಮಹಿಳೆಯನ್ನು ಕರೆದುಕೊಂಡು ಹೋಗಿ ಮಂಗಳೂರಿನ ಆಕೆಯ ಫ್ಲಾಟ್ ಬಳಿ ಬಿಟ್ಟಿದ್ದಾನೆ. ಮಹಿಳೆಯು ಪರಿಚಿತನಿಂದಲೇ ತನಗಾದ ಅನುಭವವನ್ನು ಕೆಫೆಯೊಂದರ ಮ್ಯಾನೇಜರ್ ಬಳಿ ಹೇಳಿಕೊಂಡಿದ್ದಾಳೆ.
ಇದನ್ನು ತಿಳಿದುಕೊಂಡ ಆರೋಪಿಯು ಪುನಃ ದಿನಾಂಕ ೨೩ ರಂದು ಮಹಿಳೆಯನ್ನು ಹಿಂಬಾಲಿಸಿಕೊAಡು ಬಂದು ಕಾಪ್ರಿ ಗುಡ್ಡೆ ಎಂಬಲ್ಲಿ ಅವಾಚ್ಯವಾಗಿ ನಿಂದಿಸಿ, ಹಲ್ಲೆಯನ್ನೂ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ಈ ಎಲ್ಲಾ ದೌರ್ಜನ್ಯದ ಕುರಿತು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆದರಿಸಿ ಬಿಲ್ಡರ್ ರಶೀದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಶೀದ್ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. -ಕೋವರ್ಕೊಲ್ಲಿ ಇಂದ್ರೇಶ್