ಮುಳ್ಳೂರು, ಅ. ೨೬: ಆಲೂರು-ಸಿದ್ದಾಪುರ ಗ್ರಾ.ಪಂ.ಯ ೨೦೨೪-೨೫ನೇ ಸಾಲಿನ ಗ್ರಾಮಸಭೆ ಸಾರ್ವಜನಿಕ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆ ಯಲ್ಲಿ ನಡೆಯಿತು. ನಾಗರಿಕ ಸೇವೆ ಮತ್ತು ಆಹಾಯ ಇಲಾಖೆ ನಿರೀಕ್ಷಕಿ ಯಶಸ್ವಿನಿ ಬಿಪಿಎಲ್ ವಿಷಯದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಗ್ರಾಮಸ್ಥ ಸಂದೇಶ್ ಆಕ್ಷೇಪ ವ್ಯಕ್ತಪಡಿಸಿ ಬಿಪಿಎಲ್ ಬಡವರ್ಗದ ಅರ್ಹ ಫಲಾನುಭವಿಗೆ ದೊರೆಯಬೇಕು.
ಆದರೆ, ಅಧಿಕಾರಿಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆ ಕಟ್ಟಿಕೊಂಡವರಿಗೆ, ಜಮೀನು ಇದ್ದವರಿಗೆ ವಿತರಣೆ ಮಾಡುತ್ತಾರೆ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಅಧಿಕಾರಿ ಯಶಸ್ವಿನಿ, ಇಲಾಖೆ ಪರಿಶೀಲನೆ ನಡೆಸಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿದೆ. ಎಪಿಎಲ್ ಕಾರ್ಡ್ದಾರರು ಬಿಪಿಎಲ್ ಕಾರ್ಡ್ ಪಡೆದಿರುವ ಕಾರ್ಡ್ನ್ನು ರದ್ದು ಪಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.ಸಾಮಾಜಿಕ ಅರಣ್ಯ ಇಲಾಖೆ ಸಾರ್ವಜನಿಕರು ಸ್ವಂತ ನರ್ಸರಿ ಮಾಡಲು ಪ್ರೋತ್ಸಾಹಿಸುತ್ತಿದೆ. ನರೆಗಾ ಯೋಜನೆ ಮೂಲಕ ನರ್ಸರಿ ಮಾಡಬಹುದು ಎಂದು ಇಲಾಖೆಯ ಯೋಜನೆಗಳ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಭವ್ಯ ಮಾಹಿತಿ ನೀಡಿದರು.
ಕಂದಾಯ ಇಲಾಖೆಯು ಆಧುನಿಕ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಸರಳವಾಗಿ ಸೇವೆ ನೀಡುತ್ತಿದೆ. ಹಿಂದಿನAತೆ ಕಡತ ವಿಲೇವಾರಿ ತಡವಾಗುತ್ತಿಲ್ಲ ಎಂದು ಕಂದಾಯ ಇಲಾಖೆಯ ಸೇವೆ ಸೌಲಭ್ಯಗಳು, ಸಿ ಮತ್ತು ಡಿ ಲ್ಯಾಂಡ್ ಮುಂತಾದ ಜಮೀನುಗಳಿಗೆ ಸಂಬAಧ ವಿಷಯಗಳ ಬಗ್ಗೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ವಾಣಿ ಮಾಹಿತಿ ನೀಡಿದರು. ಆಲೂರು-ಸಿದ್ದಾಪುರ ಆಸ್ಪತ್ರೆ ವೈದ್ಯಾದಿಕಾರಿ ಡಾ. ಸುಪರ್ಣ ಮಾಹಿತಿ ನೀಡಿ, ಡೆಂಗ್ಯು, ಚಿಕೂನ್ ಗೂನ್ಯ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ ಪರಿಸರದಲ್ಲಿ ಸ್ವಚ್ಛತೆ ಸೇರಿದಂತೆ ನೀರು ನಿಂತುಕೊಳ್ಳದAತೆ ಗಮನ ಹರಿಸಬೇಕೆಂದರು. ಗ್ರಾಮಸಭೆಯಲ್ಲಿ ಉಪ ಅರಣ್ಯ ವಲಯಾಧಿಕಾರಿ ಸೂರ್ಯ, ಕೃಷಿ ಅಧಿಕಾರಿ ಸೋಮಣ್ಣ, ಚೆಸ್ಕಾಂ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ನೋಡೆಲ್ ಅಧಿಕಾರಿ ಜಿ.ಎಂ. ಹೇಮಂತ್ ಕಾರ್ಯ ನಿರ್ವಹಿಸಿದ್ದರು. ಗ್ರಾಮಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮೋಹನ್ ಸರ್ವ ಗ್ರಾ.ಪಂ. ಸದಸ್ಯರು, ಪಿಡಿಓ ಹರೀಶ್, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.