ಶ್ರೀಮಂಗಲ, ಅ. ೨೬: ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ರಾಜ್ಯ ೧೫ ಲಕ್ಷ ಜನಸಂಖ್ಯೆಗೆ ಎರಡು ಲೋಕಸಭೆ ಹಾಗೂ ೪೦ ವಿಧಾನಸಭಾ ಸ್ಥಾನವನ್ನು ಹೊಂದಿದೆ. ಆದರೆ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಒಂದು ಲೋಕಸಭೆ ಸ್ಥಾನವನ್ನು ಹೊಂದಿಲ್ಲ. ಕೇವಲ ಎರಡು ವಿಧಾನಸಭಾ ಕ್ಷೇತ್ರವನ್ನು ಹೊಂದಿದ್ದು ಕೊಡಗಿಗೆ ಸೂಕ್ತ ರಾಜಕೀಯ ಪ್ರಾತಿನಿದ್ಯ ಸಿಗದೇ ಅವಕಾಶ ವಂಚಿತವಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ, ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗೋವಾ ರಾಜ್ಯದಲ್ಲಿ ತಲಾ ೩೫ ಸಾವಿರ ಜನಸಂಖ್ಯೆಗೆ ಒಂದು ವಿಧಾನಸಭಾ ಸ್ಥಾನವನ್ನು ನೀಡಲಾಗಿದೆ. ಆದರೆ ಕೊಡಗಿನಲ್ಲಿ ೬ ಲಕ್ಷ ಜನಸಂಖ್ಯೆಗೆ ಕೇವಲ ಎರಡು ವಿಧಾನಸಭಾ ಸ್ಥಾನವನ್ನು ನೀಡಲಾಗಿದೆ.ಒಂದು ಲೋಕಸಭಾ ಸ್ಥಾನವು ಇಲ್ಲದಾಗಿದೆ. ಗೋವಾ ರಾಜ್ಯದಂತೆ ಕೊಡಗನ್ನು ಪರಿಗಣಿಸಬೇಕು. ಕೊಡಗಿಗೆ ಸೂಕ್ತ ಲೋಕಸಭೆ ಹಾಗೂ ವಿಧಾನಸಭೆಯನ್ನು ನೀಡಿದರೆ ಕೊಡಗಿನ ಅಭಿವೃದ್ಧಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.
ಕೊಡಗು ಜಿಲ್ಲೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೂಕ್ತ ರಾಜಕೀಯ ಪ್ರಾತಿನಿದ್ಯ ನೀಡದೆ ನಿರ್ಲಕ್ಷö್ಯ ಮಾಡಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಮುಂಬೈ ಪಶ್ಚಿಮ ಕ್ಷೇತ್ರದಲ್ಲಿ ೧೯೭೧ ರಲ್ಲಿ ಸ್ವತಂತ್ರವಾಗಿ ಲೋಕಸಭೆ ಚುನಾವಣೆಗೆ ನಿಂತು ೯೦ ಸಾವಿರ ಮತ ಪಡೆದು ಸೋತರು. ಹಾಗೆಯೇ ಎಂ.ಸಿ. ನಾಣಯ್ಯ ಅವರು ಉತ್ತಮ ಆಡಳಿತಗಾರನಾಗಿದ್ದರೂ ಅವರು ಮುಖ್ಯಮಂತ್ರಿ ಆಗಲಿಲ್ಲ. ಎ.ಕೆ. ಸುಬ್ಬಯ್ಯ ಅವರು ಅತ್ಯಂತ ಕಾನೂನು ಪರಿಣತಿ ಹಾಗೂ ಸಂವಿಧಾನ ಅರಿವು ಇರುವ ನಾಯಕರಾಗಿದ್ದರೂ ಸ್ಥಾನ ಸಿಗಲಿಲ್ಲ. ಹಾಗೆಯೇ ಐದು ಬಾರಿ ಗೆಲುವು ಸಾಧಿಸಿದ ಅಪ್ಪಚ್ಚು ರಂಜನ್ ಅವರಿಗೆ ಕಾಟಾಚಾರದ ಆರು ತಿಂಗಳ ಸಚಿವ ಸ್ಥಾನವನ್ನು ನೀಡಲಾಯಿತು. ಹಾಲಿ ಶಾಸಕ ಎ. ಎಸ್.ಪೊನ್ನಣ್ಣ ಅವರಿಗೆ ಅತ್ಯಂತ ಹೆಚ್ಚು ಅರ್ಹತೆ ಇದ್ದರೂ ಸಚಿವ ಸ್ಥಾನ ನೀಡಲಿಲ್ಲ. ಹೀಗೆ ರಾಜಕೀಯ ಪ್ರಾತಿನಿದ್ಯ ಇಲ್ಲದೆ ಅರ್ಹತೆ ಇದ್ದರೂ ಅವಕಾಶ ವಂಚಿತರಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯ ಹಲವರಿಗೆ ರಾಜ್ಯಸಭಾ ಸ್ಥಾನಕ್ಕೆ ಆಯ್ಕೆಯಾಗಲು ಎಲ್ಲಾ ಅರ್ಹತೆ ಹೊಂದಿದ್ದರೂ ಅವರನ್ನು ನಿರ್ಲಕ್ಷಿಸಲಾಯಿತು ಎಂದು ವಿಮರ್ಶೆ ಮಾಡಿದರು.
ಕೇವಲ ಜಾತಿ ಆಧಾರದಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ. ಇಲ್ಲಿ ಅರ್ಹತೆ ಮುಖ್ಯವಾಗುವುದಿಲ್ಲ
ಹಾಗೆಯೇ ಲೋಕಸಭೆಗೂ ಜಾತಿ ಆಧಾರದಲ್ಲಿ ಟಿಕೆಟ್ ಹಂಚಿಕೆಯಾಗುತ್ತಿದೆ. ಅತ್ಯಂತ ಸೂಕ್ಷ್ಮ ಹಾಗೂ ಅಲ್ಪಸಂಖ್ಯಾತ ಕೊಡವ ಜನಾಂಗ ನಾಯಕರಿಗೆ ಅರ್ಹತೆ ಇದ್ದರೂ ಜಾತಿ ರಾಜಕಾರಣದ ಲಾಭಿ ಇಲ್ಲದೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಟಿ. ಶೆಟ್ಟಿಗೇರಿ ಕೊಡವ ಸಮಾಜ ಕಳೆದ ೮ ವರ್ಷಗಳಿಂದ ಪತ್ತಲೋದಿ ಕಾರ್ಯಕ್ರಮ ಆಚರಿಸುತ್ತ ಪ್ರತಿಭೆಗಳಿಗೆ ವೇದಿಕೆ ನೀಡುತ್ತಾ ಬಂದಿದೆ. ಇದು ಎಲ್ಲಾ ಕೊಡವ ಸಮಾಜಗಳಿಗೆ ಮಾರ್ಗಸೂಚಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ಕೊಡವ ಜನಾಂಗದಲ್ಲಿ ಜನಸಂಖ್ಯೆ ಹೆಚ್ಚಾಗಬೇಕು. ಇದರ ಬಗ್ಗೆ ಜನಾಂಗದಲ್ಲಿ ಗಂಭೀರವಾದ ಚಿಂತನೆ ಹಾಗೂ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಟಿ-ಶೆಟ್ಟಿಗೇರಿ ಕೊಡವ ಸಮಾಜ ಸಹ ನಿರ್ಣಯವನ್ನು ಜಾರಿಗೆ ತರಲಿದೆ ಅದನ್ನು ಈ ಪತ್ತಲೋದಿ ಕಾರ್ಯಕ್ರಮದ ಅಂತಿಮ ದಿನದಂದು ಘೋಷಣೆ ಮಾಡಲಾಗುವುದು ಎಂದು ಹೇಳಿದರು. ಬೊಳ್ಳಜಿರ ಸುಶೀಲಾ ಅಶೋಕ್ ಅವರು ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯಬೇಕೆAದರು.
ಈ ಸಂದರ್ಭ ಮರೆನಾಡ್ ಕೊಡವ ಸಮಾಜ ಹಾಗೂ ಬಿರುನಾಣಿ ಯ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ವೇದಿಕೆಯಲ್ಲಿ ಮರೆನಾಡ್ ಕೊಡವ ಸಮಾಜ ನಿರ್ದೇಶಕಿ, ಬುಟ್ಟಿಯಂಡ ಸುನಿತ ಗಪ್ಪಣ್ಣ, ಬಾಳೆಯಡ ಅಶೋಕ್, ಮೀರಾ ಅಶೋಕ್, ಕರ್ನಂಡ ರೂಪ ಹಾಜರಿದ್ದರು.
ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಖಜಾಂಚಿ ಚಂಗುಲAಡ ಸತೀಶ್, ನಿರ್ದೇಶಕರುಗಳಾದ ಮುಕ್ಕಾಟಿರ ಸಂದೀಪ್, ಚಂಗುಲAಡ ಅಶ್ವಿನಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಕೋಟ್ರಮಾಡ ಸುಮಂತ್ ಸ್ವಾಗತಿಸಿ, ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.