ಮಡಿಕೇರಿ, ಅ. ೨೬: ಕೊಡಗು ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ ಅಂದರೆ ೨೦೦ ಕೋಟಿ ರೂಗಳಿಗೂ ಹೆಚ್ಚಿನ ಮೊತ್ತದ ಹಣ ದುರ್ಬಳಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಗಂಭೀರ ಆರೋಪ ಮಾಡಿದ್ದಾರೆ.
೨೦೨೦ ಮತ್ತು ೨೦೨೧ ರಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಅಂದಿನ ರಾಜ್ಯಸರ್ಕಾರ ಹಾಗೂ ಜನಪ್ರತಿನಿಧಿಗಳ
ಕೊಡಗಿನಲ್ಲಿ ೨೦೦ ಕೋಟಿ ರೂಗಳ ಹಗರಣ : ತೆನ್ನಿರ ಮೈನಾ ಆರೋಪ
(ಮೊದಲ ಪುಟದಿಂದ) ಕೃಪಾಕಟಾಕ್ಷದಿಂದ ಇಲಾಖಾ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಹಗರಣ ನಡಿಸಿದ್ದು, ಇದು ಕೊಡಗಿನ ಇತಿಹಾಸದಲ್ಲಿಯೇ ನಡೆದ ಏಕೈಕ ಶತಕೋಟಿ ರೂಗಳ ಹಗರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಗರಣ ನಡೆಸುವ ಮೂಲ ಉದ್ದೇಶದಿಂದಲೇ ಅಧಿಕಾರಿಯೊಬ್ಬರನ್ನು ಹಲವು ವರ್ಷಗಳಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉಳಿಸಿದ್ದ ಅಂದಿನ ಜನಪ್ರತಿನಿಧಿಯೊಬ್ಬರು ಆ ಅಧಿಕಾರಿಯ ಮೂಲಕ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ಟೆಂಡರ್ ನಡೆಸಿ ಕಾಮಗಾರಿಯನ್ನು ನೀಡಿದ್ದು ಸದರಿ ಪ್ರಕರಣದ ಬಗ್ಗೆ ಸದ್ಯದಲ್ಲಿಯೇ ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ದಾಖಲೆಗಳನ್ನು ಕಲೆ ಹಾಕಿದ್ದು ಇಂತಹ ಅಕ್ರಮವೆಸಗಿರುವ ಅಧಿಕಾರಿಗಳು ಮತ್ತು ಅವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರೂ ಶಿಕ್ಷಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದಾರೆ.