ವೀರಾಜಪೇಟೆ, ಅ. ೨೬: ತಾಯಿಯ ಸಾವಿನಿಂದ ಮನನೊಂದ ಯುವಕ ನೇಣಿಗೆ ಶರಣಾದ ಘಟನೆ ನಗರದ ಚಿಕ್ಕಪೇಟೆಯಲ್ಲಿ ನಡೆದಿದೆ. ಪಟ್ಟಣದ ಚಿಕ್ಕಪೇಟೆ ಮೈಕ್ರೋ ಸ್ಟೇಷನ್ ನಿವಾಸಿ ದಿ. ಮೋಹನ್ಕುಮಾರ್ ಮತ್ತು ಪಟ್ಟು ದಂಪತಿ ಪುತ್ರ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಎಸ್.ಎಂ. ಮಧುಸೂದನ್ (೨೪) ನೇಣಿಗೆ ಶರಣಾದ ವ್ಯಕ್ತಿ.
ಕೆಲವು ತಿಂಗಳ ಹಿಂದೆ ಮೃತನ ತಾಯಿ ಪಟ್ಟು ವಯೋಸಹಜ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ತಾಯಿಯ ಮರಣದಿಂದ ನೊಂದಿದ್ದ ಯುವಕ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕೋಣೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಅಣ್ಣ ಮಂಜುನಾಥ್ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. -ಕಿಶೋರ್ಕುಮಾರ್ ಶೆಟ್ಟಿ