ಮಡಿಕೇರಿ, ಅ. ೨೮: ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ವತಿಯಿಂದ ಕಿಂಬರ್ಲಿ ಕೂರ್ಗ್ ಸಹಯೋಗದೊಂದಿಗೆ ೯ನೇ ಅಂರ‍್ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಕ್ಯಾಂಪ್ ಹಾಗೂ ನ್ಯಾಷನಲ್ ಪ್ರೊ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನವೆಂಬರ್‌ನಲ್ಲಿ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಲೀಗ್‌ನ ಕಾರ್ಯದರ್ಶಿ ರಾಜಶೇಖರ್ ತಿಳಿಸಿದರು. ವಾಕೋ ಇಂಡಿಯಾ ಕಿಕ್‌ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಸಂತೋಷ್ ಕುಮಾರ್ ಅಗರ್‌ವಾಲ್ ಮತ್ತು ಕರ್ನಾಟಕ ಕಿಕ್‌ಬಾಕ್ಸಿಂಗ್ ಲೀಗ್ ಅಧ್ಯಕ್ಷ ಮಹದೇವೇಗೌಡ ಅವರ ಮಾರ್ಗದರ್ಶನದಲ್ಲಿ ನ.೪ ರಿಂದ ೧೧ ರವರೆಗೆ ನಗರದ ಜನರಲ್ ತಿಮ್ಮಯ್ಯ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಅಂರ‍್ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಕ್ಯಾಂಪ್ ನಡೆಯಲಿದೆ. ನ.೧೦ ರಿಂದ ೧೪ ರವರೆಗೆ ನಗರದ ಗಾಂಧಿಮೈದಾನದಲ್ಲಿ ನ್ಯಾಷನಲ್ ಪ್ರೊ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ೭೦೯೦೧೪೪೬೬೪೧, ೯೧೧೩೬೯೩೨೮೭ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಅಂರ‍್ರಾಷ್ಟಿçÃಯ ಕಿಕ್ ಬಾಕ್ಸಿಂಗ್ ಕ್ಯಾಂಪ್‌ಗೆ ಸುಮಾರು ೨೦೦ಕ್ಕೂ ಅಧಿಕ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ೭೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಕಿಕ್ ಬಾಕ್ಸರ್ ಮತ್ತು ಕೋಚ್‌ಗಳಿಗೆ ಬೇಕಾದ ತರಬೇತಿ ನೀಡಲಾಗುವುದು. ಚಾಂಪಿಯನ್‌ಶಿಪ್ ಉನ್ನತ ಮಟ್ಟದ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿನ ಸ್ಪರ್ಧೆಗಳು ಜಾಗತಿಕ ಮತ್ತು ರಾಷ್ಟçಮಟ್ಟದ ಆಯ್ಕೆ ಪ್ರಕ್ರಿಯೆಗಳಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೇ, ಇದರ ಅಂಗವಾಗಿ ಕಲ್ಟ್ಫಿಟ್ ಸಂಸ್ಥೆಯು ೧೦೦ ಕಿಕ್ ಬಾಕ್ಸಿಂಗ್ ತರಬೇತುದಾರರು ಮತ್ತು ಕೋಚ್‌ಗಳನ್ನು ನೇಮಕ ಮಾಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಲೀಗ್ ಅಧ್ಯಕ್ಷ ಮಹದೇವೇಗೌಡ, ಕಿಂಬರ್ಲಿ ಕೂರ್ಗ್ನ ಪ್ರಮುಖ ಮದನ್ ಉಪಸ್ಥಿತರಿದ್ದರು.