ಸೋಮವಾರಪೇಟೆ,ಅ.೨೮: ಕಂದಾಯ ಇಲಾಖೆ ಮೂಲಕ ನೂತನವಾಗಿ ಆರಂಭಗೊAಡಿರುವ ಗ್ರಾಮವಾರು ಕಂದಾಯ ದಾಖಲೆಗಳನ್ನು ಒಟ್ಟುಗೂಡಿಸುವ ‘ಒನ್ ಟು ಫೈವ್’ ಆಂದೋಲನದ ಕಚೇರಿಯನ್ನು ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿಯಲ್ಲಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಇಂದಿಗೂ ಸಾಕಷ್ಟು ದುರಸ್ತಿ ಫೈಲ್‌ಗಳ ಸಮಸ್ಯೆ ಇದ್ದು, ಸರ್ಕಾರ ವಿಶೇಷ ಆಂದೋಲನದ ಮೂಲಕ ಒಂದೇ ಬಾರಿಗೆ ದುರಸ್ತಿಪಡಿಸುವ ಸಲುವಾಗಿ ಒನ್ ಟು ಫೈವ್ ಕಚೇರಿಗೆ ಚಾಲನೆ ನೀಡಲಾಗಿದೆ. ಅಧಿಕಾರಿಗಳು ಆದಷ್ಟು ಬೇಗ ರೈತರ ಜಮೀನನ್ನು ದುರಸ್ತಿಪಡಿಸಿ ದಾಖಲಾತಿ ಮಾಡಿಕೊಡುವ ಮೂಲಕ ಮಧ್ಯವರ್ತಿಗಳಿಂದ ರೈತರನ್ನು ಕಾಪಾಡಬೇಕಿದೆ ಎಂದು ಹೇಳಿದರು.
ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಈ ಯೋಜನೆಯಲ್ಲಿ ಒಂದು ಗ್ರಾಮದ ಯಾವುದೇ ಸರ್ವೆ ನಂಬರ್ ತೆಗೆದುಕೊಂಡಲ್ಲಿ ಅದರಲ್ಲಿ ಬರುವ ಎಲ್ಲ ಜಮೀನುಗಳನ್ನು ಒಂದೇ ಬಾರಿಗೆ ದುರಸ್ತಿಪಡಿಸಲಾಗುತ್ತದೆ. ಆರಂಭಿಕವಾಗಿ ನೇರುಗಳಲೆ ಗ್ರಾಮ ಪಂಚಾಯಿತಿ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದರು
ಈ ಸಂದರ್ಭ ಪ್ರಮುಖರಾದ ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್, ಜನಾರ್ಧನ್ ಸೇರಿದಂತೆ ಇತರರು ಭಾಗವಹಿಸಿದ್ದರು.