ನಾಪೋಕ್ಲು, ಅ. ೨೭: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಇಂದು ಪತ್ತಾಲೋದಿ ತೊಲೆಯಾರ್ ೧೦ ರ ಆರಾಧನೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಾವೇರಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದ ಮೂರನೇ ದಿನ ಕೊಡಗಿನೆಲ್ಲೆಡೆ ಸಂಭ್ರಮದ ತುಲಾಸಂಕ್ರಮಣದ ಕುರುಹಾಗಿ ಮನೆ ಮನೆಗಳಲ್ಲಿ ‘ಕಣಿಪೂಜೆÀ’ ಆಚರಿಸಲಾಗುತ್ತದೆ. ಸೂರ್ಯೋದಯ ದಿಂದ ಮೊದಲ್ಗೊಂಡು ಸರಿಯಾಗಿ ೧೦ನೇ ಸೂರ್ಯೋದಯದ ದಿನವೇ ಪತ್ತಾಲೋದಿಯಾಗಿದೆ.

ಕೊಡವ ಸಂಪ್ರದಾಯಸ್ಥ ಕುಟುಂಬಗಳಿಗೆ ಹಾಗೂ ಇತರ ಎಲ್ಲಾ ಕೊಡವ ಭಾಷಿಕರಿಗೆ ಈ ಪವಿತ್ರ ದಿನ ಹೊಸಮನೆಗೆ ಜಾಗ ಗುರುತು ಮಾಡುವುದು ಹಾಗೂ ಗೃಹ ಪ್ರವೇಶದಂತಹ ಶುಭ ಸಮಾರಂಭಗಳಿಗೆ ಪ್ರಶಸ್ತವಾದದ್ದು, ಹಲವಾರು ವರ್ಷಗಳಿಂದ ಪತ್ತಾಲೋದಿಯ ಈ ದಿನವನ್ನು ಪರದಂಡ ಕುಟುಂಬಸ್ಥರು ಪಾಡಿಯಲ್ಲಿ ‘ತೊಲಿಯಾರು ೧೦ ರ ಆರಾಧನೆ’ ಎಂದು ವಿಶೇಷವಾಗಿ ಆರಾಧಿಸುತ್ತಾ ಬಂದಿರುತ್ತಾರೆ. ಅಂತೆಯೇ ಈ ವರ್ಷ ಕೂಡಾ ಸಂಪ್ರದಾಯದAತೆ ಪರದಂಡ ಐನ್‌ಮನೆಯಿಂದ ‘ಪಾಲ್ ಬೈವಾಡ್’ನೊಂದಿಗೆ ಆಗಮಿಸಿದ ಕುಟುಂಬಸ್ಥರು ಉತ್ಸವಕ್ಕೆ ಮುನ್ನುಡಿ ಇಡುತ್ತಿದ್ದಂತೆ ಪೂರ್ವನಿಯೋಜಿತ ತುಲಾಭಾರ ಸೇವೆಗಳು, ಸತ್ಯನಾರಾಯಣ ಪೂಜೆ, ಜಪ - ತಪಗಳು ನಡೆದವು.

(ಮೊದಲ ಪುಟದಿಂದ) ವಿಶೇಷವಾದ ಪುಷ್ಪಾಲಂಕಾರದಿAದ ಕಂಗೊಳಿಸಿದ ದೇವಾಲಯದ ಹೊರಾಂಗಣ, ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳು ಹಬ್ಬದ ಮೆರುಗನ್ನು ಹೆಚ್ಚಿಸಿದ್ದವು. ದೇವರ ನೃತ್ಯ ಪ್ರದರ್ಶನದ ವಿವಿಧ ಭಂಗಿಗಳು, ಚಂಡೆ ಚಾಮರದೊಂದಿಗೆ ಸಂಪ್ರದಾಯದAತೆ ಕೊನೆಯ ಸುತ್ತಿನ ನಂತರ ಹಲಸಿನ ಮರದ ಕೆಳಗೆ ಭಕ್ತಾದಿಗಳು, ತುಲಾಭಾರ ಸೇವೆ ಅರ್ಪಿಸಿದವರನ್ನು ಉದ್ದೇಶಿಸಿ ದೇವತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರೂ ಆದ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪತ್ತಾಲೋದಿಯ ದಿನ ವಿಶೇಷವನ್ನು ವಿವರಿಸಿದರು.

ಈ ದಿನವನ್ನೇ ಇಗುತ್ತಪ್ಪನ ಆರಾಧನೆಗೋಸ್ಕರ ಆಯ್ಕೆ ಮಾಡಿದ ಹಿಂದಿನ ಸ್ವಾರಸ್ಯವನ್ನು ವಿವರಿಸಿ ನಾಡಿನ ಎಲ್ಲಾ ಸಮುದಾಯದ ಭಕ್ತ ವೃಂದದ ಸುಭೀಕ್ಷೆಗೆ ಕ್ಷೇಮಾಭಿವೃದ್ಧಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಉತ್ಸವ ಸಂಪನ್ನಗೊAಡಿತು. ತದನಂತರ ಸಾಮೂಹಿಕವಾಗಿ ಮಧ್ಯಾಹ್ನದ ಅನ್ನಪ್ರಸಾದ ವಿನಿಯೋಗ ನಡೆಯಿತು. ಹೆಚ್ಚಿನ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.