ಮಡಿಕೇರಿ, ಅ. ೨೭: ಶಿವಮೊಗ್ಗದಲ್ಲಿ ಸ್ಕೂಲ್‌ಗೇಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯ ಅಡಿಯಲ್ಲಿ ೧೯ ವಯಸ್ಸಿನ ಕೆಳಗಿರುವ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಾಕ್ಸಿಂಗ್ ಆಟದಲ್ಲಿ, ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಗೋಣಿಕೊಪ್ಪಲು ಲಿಟ್ಲ್ಫ್ಲವರ್ ಶಾಲೆಯಲ್ಲಿ ಅಳವಡಿಸಿರುವ ಬಾಕ್ಸಿಂಗ್ ರಿಂಗ್‌ನಲ್ಲಿ ತರಬೇತಿ ಹೊಂದಿದ ಯುವ ಬಾಕ್ಸರ್‌ಗಳಾದ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳನ್ನು ಪಡೆದಿದ್ದು, ರಾಷ್ಟಿçÃಯ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಹಾಗೆಯೆ ಕುಮಾರ್ ಹರ್ಷ ಬೆಳ್ಳಿಯ ಪದಕವನ್ನು, ಕುಮಾರ್ ದ್ಯಾನ್ ಕಂಚಿನ ಪದಕವನ್ನು ತಂದು ಕೊಡಗಿಗೆ ಕೀರ್ತಿ ತಂದಿದ್ದಾರೆ.

ಇವರಿಗೆ ಬಾಕ್ಸಿಂಗ್ ತರಬೇತಿಯನ್ನು ಬಾಕ್ಸಿಂಗ್ ಪರಿಣಿತರು ಮತ್ತು ಎಮ್.ಇ.ಜಿ. ನಿವೃತ್ತ ಬಾಕ್ಸರ್‌ಗಳಾದ ದೇಯಂಡ ಡಿಕ್ಕ ಮೇದಪ್ಪ ಮತ್ತು ಶರತ್ ನೀಡುತ್ತಿದ್ದಾರೆ.

ಕೊಡಗು ಬಾಕ್ಸಿಂಗ್ ಸಂಸ್ಥೆ ಮುಂಚೂಣಿಯಲ್ಲಿರುವ ಮತ್ತು ಕಾರ್ಯದರ್ಶಿಗಳಾದ ಕರ್ನಲ್ ಚೆಪ್ಪಡೀರ ಪೂಣಚ್ಚ ಮುತ್ತಣ್ಣನವರು ವಿಜೇತರ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.