ಗೋಣಿಕೊಪ್ಪಲು, ಅ. ೨೭: ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಪ್ರಯತ್ನ ನಡೆಸುತ್ತಿದ್ದು ಕಳೆದೆರಡು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಆಡಳಿತ ಮಂಡಳಿಯು ಸೌಲಭ್ಯಗಳನ್ನು ಒದಗಿಸಿದೆ ಎಂದು ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ. ಕಾಲೇಜಿನ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಗತಿಯ ಬಗ್ಗೆ ವಿವರ ನೀಡಿದ ಕಾವೇರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಪ್ರೊ. ಐ.ಕೆ. ಬಿದ್ದಪ್ಪ, ಗೌರವ ಕಾರ್ಯದರ್ಶಿ ಕೆ.ಪಿ. ಬೋಪಣ್ಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಎರಡು ವರ್ಷಗಳ ಶೈಕ್ಷಣಿಕ ಚಟುವಟಿಕೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಸಾಕಷ್ಟು ಬದಲಾವಣೆಯೊಂದಿಗೆ ಉನ್ನತ್ತೀಕರಣಗೊಳಿಸಿ ಹಲವಾರು ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲಾಗಿದೆ. ವಿದ್ಯಾಸಂಸ್ಥೆಯ ಅಧೀನದಲ್ಲಿರುವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ, ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿಯನ್ನು ಕಾಣುವ ಮೂಲಕ ದಕ್ಷಿಣ ಕೊಡಗಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.

ಸAಸ್ಥೆಯ ಅಧೀನ ಕಾಲೇಜುಗಳಲ್ಲಿ ನಗದು ರಹಿತ ವಹಿವಾಟು ಜಾರಿಗೆ ತರುವ ಮೂಲಕ ಹಣಕಾಸು ವ್ಯವಹಾರದಲ್ಲಿ ಆಗುತ್ತಿದ್ದ ಗೊಂದಲವನ್ನು ನಿವಾರಿಸಲಾಗಿದೆ. ಗೋಣಿಕೊಪ್ಪಲು, ಕಾವೇರಿ ಕಾಲೇಜಿಗೆ ೩ ಬಸ್ಸುಗಳನ್ನು ಖರೀದಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಲು ಸಹಕಾರಿಯಾಗಿದೆ.

ಸಿ.ಪಿ. ಕುಶಾಲಪ್ಪ ಸ್ಮಾರಕ ಸಭಾಭವನದ ಮೊದಲ ಅಂತಸ್ತಿನಲ್ಲಿ ಸೆಂಟ್ರಲೈಸ್ಟ್ ಎ.ಸಿ. ನಿರ್ಮಿತ ಸೆಮಿನಾರ್ ಹಾಲ್‌ಗೆ ಉತ್ತಮ ಗುಣಮಟ್ಟದ ಸೌಂಡ್ ಸಿಸ್ಟಂ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕಾಲೇಜು ಮುಂಭಾಗದಲ್ಲಿರುವ ಕಾವೇರಿ ಉದ್ಯಾನವನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ೨೦೨೪-೨೫ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಬಿ.ಸಿ.ಎ ಶಿಕ್ಷಣದಲ್ಲಿ ಂಡಿಣiಜಿiಛಿiಚಿಟ Iಟಿಣeಟಟigeಟಿಛಿe & ಒಚಿಛಿhiಟಿe ಐeಚಿಡಿಟಿiಟಿg ಚಿಟಿಜ ಈuಟಟ Sಣಚಿಛಿಞ, ಕೋರ್ಸ್ಗಳನ್ನು ಪರಿಚಯಿಸಲಾಗಿದೆ.

ಪದವಿ, ಪದವಿಪೂರ್ವ, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನೂತನವಾಗಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು ಕಾಲೇಜಿನ ಆವರಣದಲ್ಲಿ ೧೯೪ ಸಿಸಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಕಾಲೇಜುಗಳ ಕ್ಯಾಂಟಿನ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ವೀರಾಜಪೇಟೆ ಕಾವೇರಿ ಕಾಲೇಜು ಸ್ಥಳದ ದಾಖಲಾತಿಯ ಬಗ್ಗೆ ೪೦ ವರ್ಷಗಳಿಂದ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ದಾಖಲೆಯನ್ನು ಪಡೆಯಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾವೇರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಕಬ್ಬಚ್ಚಿರ ಸುಬ್ರಮಣಿ ಉಪಸ್ಥಿತರಿದ್ದರು.